ಕರ್ನಾಟಕ

karnataka

ETV Bharat / state

ಖಾಸಗಿ ಬಸ್ ಮಾಲೀಕನಿಂದ ಕಿರುಕುಳ ಆರೋಪ: ಪೊಲೀಸ್​ ಠಾಣೆ ಮುಂದೆ ಚಾಲಕರ ಪ್ರತಿಭಟನೆ - kannada news

ಮಹಿಮಾ ಎಂಬ ಖಾಸಗಿ ಬಸ್ ಮಾಲೀಕ ಮ್ಯಾಕ್ಸ್ವೆಲ್, ಬಸ್​ಗಳ ಸಮಯ ಪಾಲನೆಯ ವಿಷಯಕ್ಕೆ ಸಂಬಂಧಿಸಿದಂತೆ ದಿನನಿತ್ಯ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ್ರೆ ಗೂಂಡಾನಂತೆ ವರ್ತಿಸುತ್ತಿದ್ದು, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ ಎಂದು ಡ್ರೈವರ್​​ಗಳು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಬಸ್ ಗಳನ್ನು ಸ್ಟೇಷನ್ ಮುಂಭಾಗ ನಿಲ್ಲಿಸಿ ಪ್ರತಿಭಟನೆ

By

Published : Jun 18, 2019, 10:30 PM IST

ಮಂಗಳೂರು:ಖಾಸಗಿ ಬಸ್ ಮಾಲೀಕನೋರ್ವ ಇತರ ಬಸ್​ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಸಮಯ ನಿರ್ವಹಣೆಯ ವಿಚಾರಕ್ಕೆ ಸಂಬಂಧಿಸಿದಂತೆ ದಿನನಿತ್ಯ ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ ಬಸ್​ಗಳನ್ನು ನಗರದ ಬರ್ಕೆ ಪೊಲೀಸ್ ಸ್ಟೇಷನ್ ಮುಂಭಾಗ ನಿಲ್ಲಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಸ್ಟೇಟ್ ಬ್ಯಾಂಕ್ ನಿಂದ ಕಾರ್ ಸೀಟ್ - ಅಳಕೆ - ಕುದ್ರೋಳಿ- ಉರ್ವಸ್ಟೋರಿಗೆ ಸಂಚರಿಸುವ ಬಸ್ಸಿನ ನಿರ್ವಾಹಕರು ಹಾಗೂ ಚಾಲಕರಿಗೆ ಅದೇ ಮಾರ್ಗವಾಗಿ ಸಂಚರಿಸುವ ಮಹಿಮಾ ಎಂಬ ಖಾಸಗಿ ಬಸ್ ಮಾಲೀಕ ಮ್ಯಾಕ್ಸ್ವೆಲ್, ಬಸ್​ಗಳ ಸಮಯ ಪಾಲನೆಯ ವಿಷಯಕ್ಕೆ ಸಂಬಂಧಿಸಿದಂತೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾನೆ‌. ಮಾತನಾಡಲು ಹೋದರೆ ಗೂಂಡಾನಂತೆ ವರ್ತಿಸುತ್ತಿದ್ದಾನೆ. ಅಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ ಎಂದು ಇತರೆ ಬಸ್​ಗಳ ಸಿಬ್ಬಂದಿ ಆರೋಪಿಸಿದ್ದಾರೆ.

ಬಸ್ ಗಳನ್ನು ಸ್ಟೇಷನ್ ಮುಂಭಾಗ ನಿಲ್ಲಿಸಿ ಪ್ರತಿಭಟನೆ

ತಾನೇ ಪೊಲೀಸ್ ದೂರು ನೀಡಿದ್ದಾನೆ ಎಂದು ಆರೋಪಿಸಿ ಇತರ ಬಸ್​ಗಳ ಚಾಲಕರು ಹಾಗೂ ನಿರ್ವಾಹಕರು ರೊಚ್ಚಿಗೆದ್ದು ಬಸ್​​ನ್ನು ರಸ್ತೆಗಿಳಿಸದೆ ಬರ್ಕೆ ಪೊಲೀಸ್ ಸ್ಟೇಷನ್ ಎದುರು ನಿಲ್ಲಿಸಿದ್ದರು.

ಮ್ಯಾಕ್ಸ್ವೆಲ್ ದಿನನಿತ್ಯ ಬಸ್ ಸಮಯ ಪಾಲನೆಗೆ ಸಂಬಂಧಿಸಿ, ಕಿರುಕುಳ ನೀಡುತ್ತಿದ್ದಾನೆ. ಆದ್ದರಿಂದ ಪೊಲೀಸರು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಮುಂದೆ ಆತನಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಬಸ್ ಚಾಲಕ ರೋಹಿತ್ ಒತ್ತಾಯಿಸಿದರು.

ABOUT THE AUTHOR

...view details