ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ನಾಪತ್ತೆ! - Mangalore

ಜೂನ್‌ 21 ರಂದು ಹೊರ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದ ನಂದಿನಿ ಹಿಂತಿರುಗಿ ಮನೆಗೆ ಬಂದಿಲ್ಲ. ಸ್ನೇಹಿತರ ಮನೆಯವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಈಕೆಯ ತಂದೆ ಪಾಂಡೇಶ್ವರ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

BSc student
ವಿದ್ಯಾರ್ಥಿನಿ ನಾಪತ್ತೆ

By

Published : Jun 24, 2020, 2:40 PM IST

ಮಂಗಳೂರು:ನಗರದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ನಗರದ ಕಾರ್‌ಸ್ಟ್ರೀಟ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ನಂದಿನಿ (21) ನಾಪತ್ತೆಯಾಗಿದ್ದಾಳೆ. ಜೂನ್‌ 21 ರಂದು ಹೊರ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದ ನಂದಿನಿ ಹಿಂತಿರುಗಿ ಮನೆಗೆ ಬಂದಿಲ್ಲ. ಸ್ನೇಹಿತರ ಮನೆಯವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಈಕೆಯ ತಂದೆ ಪಾಂಡೇಶ್ವರ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

5.3 ಅಡಿ ಎತ್ತರ, ಸಪೂರ ಶರೀರ, ದುಂಡು ಮುಖ, ಗೋಧಿ ಮೈ ಬಣ್ಣ ಹೊಂದಿರುವ ಈಕೆ ಕನ್ನಡ, ತುಳು, ಇಂಗ್ಲಿಷ್ ಮಾತನಾಡುತ್ತಾಳೆ. ಈಕೆ ಮನೆಯಿಂದ ತೆರಳಿದ್ದಾಗ ಕಪ್ಪು ಪ್ಯಾಂಟ್, ಕೆಂಪು ಟಿ ಶರ್ಟ್ ಧರಿಸಿದ್ದಳು. ಈಕೆಯ ಬಗ್ಗೆ ಮಾಹಿತಿ ಸಿಕ್ಕಿದವರು 0824-2220518 ಗೆ ತಿಳಿಸುವಂತೆ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details