ಕರ್ನಾಟಕ

karnataka

ETV Bharat / state

ಸ್ಕೂಟಿ ಕಾರು ಮಧ್ಯೆ ಅಪಘಾತ: ಅಣ್ಣ - ತಂಗಿ ಸಾವು - ದಕ್ಷಿಣ ಕನ್ನಡ ಅಪಘಾತ

ಅಪಘಾತದಲ್ಲಿ ಅಣ್ಣ ತಂಗಿ ಮೃತಪಟ್ಟಿರುವ ದಾರುಣ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಸ್ಕೂಟಿ ಮತ್ತು ಕಾರು ಮಧ್ಯೆ ಅಪಘಾತ
ಸ್ಕೂಟಿ ಮತ್ತು ಕಾರು ಮಧ್ಯೆ ಅಪಘಾತ

By

Published : Oct 4, 2022, 6:28 PM IST

ಸುಳ್ಯ (ದಕ್ಷಿಣ ಕನ್ನಡ):ಸ್ಕೂಟಿ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಸುಳ್ಯ ತಾಲೂಕಿನ ಎಲಿಮಲೆ ಸಮೀಪದ ಸುಬ್ರಹ್ಮಣ್ಯ - ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ನಿಶಾಂತ್ ಹಾಗೂ ಸಹೋದರಿ ಮೋಕ್ಷಾ ಮೃತಪಟ್ಟವರು.

ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿ ಮತ್ತು ಮಾರುತಿ ಕಾರು ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಶಾಂತ್ ಹಾಗೂ ಮೋಕ್ಷಾ ಅವರನ್ನು ಸ್ಥಳೀಯರು ತಕ್ಷಣವೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಮಾರ್ಗ ಮಧ್ಯೆ ನಿಶಾಂತ್ ಸಾವನ್ನಪ್ಪಿದ್ದರೆ, ಆತನ ತಂಗಿ ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.

ಸ್ಕೂಟಿ ಮತ್ತು ಕಾರು ಮಧ್ಯೆ ಅಪಘಾತ

ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸ.ಮಾ.ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

(ಓದಿ: ಕೆಎಸ್ಆರ್‌ಟಿಸಿ ಬಸ್-ಲಾರಿ ನಡುವೆ ಭೀಕರ ಅಪಘಾತ: ದಂಪತಿ ಸಾವು, 20 ಮಂದಿ ಪ್ರಯಾಣಿಕರಿಗೆ ಗಾಯ)

ABOUT THE AUTHOR

...view details