ಕರ್ನಾಟಕ

karnataka

ETV Bharat / state

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದ : ಮಂಗಳೂರಿನಲ್ಲಿ‌ ಸ್ವಾಭಿಮಾನಿ ನಡಿಗೆಗೆ ಚಾಲನೆ - Brahmashree Narayana Guru's tablo controversy

ನಾರಾಯಣ ಗುರುಗಳ ಸ್ವಾಭಿಮಾನಿ‌ ನಡಿಗೆಗೆ ನಗರದ ಬ್ರಹ್ಮಬೈದ್ಯರ್ಕಳ ಗರಡಿಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಚಾಲನೆ ನೀಡಿದರು. ಜಾಥಾದಲ್ಲಿ ಯಾವುದೇ ಇತರ ಪಕ್ಷ, ಸಂಘಟನೆಗಳ ಧ್ವಜ, ಶಾಲು ಧರಿಸಲು ಅವಕಾಶವಿರಲ್ಲ..

Drive for a self-respecting walk in Mangalore
ಮಂಗಳೂರಿನಲ್ಲಿ‌ ಸ್ವಾಭಿಮಾನಿ ನಡಿಗೆಗೆ ಚಾಲನೆ

By

Published : Jan 26, 2022, 7:37 PM IST

Updated : Jan 26, 2022, 8:31 PM IST

ಮಂಗಳೂರು :ದೆಹಲಿಯ ಗಣರಾಜ್ಯೋತ್ಸವದ ಪರೇಡ್​​ನಲ್ಲಿ‌ ಕೇರಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ ಹಿನ್ನೆಲೆ ಇಂದು ವಿವಿಧ ಬಿಲ್ಲವ ಸಂಘಟನೆಗಳಿಂದ ಆಯೋಜನೆಗೊಂಡ ನಾರಾಯಣ ಗುರುಗಳ ಸ್ವಾಭಿಮಾನಿ‌ ನಡಿಗೆಗೆ ನಗರದ ಬ್ರಹ್ಮಬೈದ್ಯರ್ಕಳ ಗರಡಿಯಲ್ಲಿ ಚಾಲನೆ ದೊರಕಿತು.

ಮಂಗಳೂರಿನಲ್ಲಿ‌ ಸ್ವಾಭಿಮಾನಿ ನಡಿಗೆಗೆ ಚಾಲನೆ

ಈ ಸ್ವಾಭಿಮಾನಿ ನಡಿಗೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಚಾಲನೆ ನೀಡಿದರು. ಈ ಜಾಥಾವು ಗರಡಿಯಿಂದ ಹೊರಟು ಪಂಪ್ ವೆಲ್ ಸರ್ಕಲ್, ಜ್ಯೋತಿ ವೃತ್ತ, ಹಂಪನಕಟ್ಟೆ ಸಿಗ್ನಲ್, ಕೆ. ಎಸ್. ರಾವ್ ರಸ್ತೆ ಮೂಲಕ ಎಂಜಿ ರೋಡ್ ತಲುಪಿ ಲೇಡಿಹಿಲ್ ವೃತ್ತವಾಗಿ ಮಣ್ಣಗುಡ್ಡ ಮುಖಾಂತರ ಕುದ್ರೋಳಿ ದೇವಾಲಯ ತಲುಪಲಿದೆ. ಇದು ಸಂಪೂರ್ಣ ವಾಹನ ಜಾಥಾವಾಗಿದ್ದು, ಯಾವುದೇ ಘೋಷಣೆ ಕೂಗಲು ಅವಕಾಶವಿಲ್ಲ.

ಇದನ್ನೂ ಓದಿ:ಕೇರಳದಲ್ಲಿನ ಬೆಂಕಿಯ ಶಾಖವನ್ನು ದ.ಕ.ಜಿಲ್ಲೆಯಲ್ಲಿ ಬೇಯಿಸುವ ಪ್ರಯತ್ನವನ್ನು ಕಾಂಗ್ರೆಸ್​​ ಮಾಡುತ್ತಿದೆ: ಸಚಿವ ಸುನಿಲ್ ಕುಮಾರ್

ಜಾಥಾದಲ್ಲಿ ಯಾವುದೇ ಇತರ ಪಕ್ಷ, ಸಂಘಟನೆಗಳ ಧ್ವಜ, ಶಾಲು ಧರಿಸಲು ಅವಕಾಶವಿಲ್ಲ. ಆದ್ದರಿಂದ ಇಡೀ ಸ್ವಾಭಿಮಾನಿ ನಡಿಗೆಯಲ್ಲಿ ಕೇವಲ ಹಳದಿ ಶಾಲು, ಹಳದಿ ಧ್ವಜಕ್ಕೆ ಮಾತ್ರ ರಾರಾಜಿಸುತ್ತಿತ್ತು. ಪಂಪ್‌ವೆಲ್ ಸರ್ಕಲ್​ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಪುಷ್ಪ ಮಳೆ ಸುರಿಸಲಾಯಿತು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 8:31 PM IST

For All Latest Updates

TAGGED:

ABOUT THE AUTHOR

...view details