ಕರ್ನಾಟಕ

karnataka

ETV Bharat / state

ಕದ್ರಿ ಶ್ರೀ ಮಂಜುನಾಥ ಬ್ರಹ್ಮಕಲಶೋತ್ಸವ... ಉಚಿತ ಆಟೋ ಸೇವೆ - undefined

ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ನಡೆಯುತ್ತಿದ್ದು, ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರನ್ನು ಹತ್ತಿರದ ನಿಲ್ದಾಣಗಳಿಗೆ ಆಟೋ ಚಾಲಕರು ಉಚಿತವಾಗಿ ಕರೆದ್ಯೊಯ್ದರು.

ಮಂಗಳೂರಲ್ಲಿ ಉಚಿತ ಆಟೋ ಸಂಚಾರ ಸೇವೆ ನೀಡಿದ ಚಾಲಕರು

By

Published : May 10, 2019, 4:31 AM IST

ಮಂಗಳೂರು: ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಉಚಿತ ಆಟೋ ಸಂಚಾರ ಸೇವೆ ಒದಗಿಸಲಾಗಿತ್ತು.

ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ನಡೆಯುತ್ತಿದ್ದು, ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರನ್ನು ಹತ್ತಿರದ ನಿಲ್ದಾಣಗಳಿಗೆ ಆಟೋ ಚಾಲಕರು ಉಚಿತವಾಗಿ ಕರೆದ್ಯೊಯ್ದರು.

ಮಂಗಳೂರಲ್ಲಿ ಉಚಿತ ಆಟೋ ಸಂಚಾರ ಸೇವೆ ನೀಡಿದ ಚಾಲಕರು

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಟೋ ಚಾಲಕರ ಮತ್ತು ಮಾಲೀಕರ ಸಂಘಟನೆಯ ಮಂಗಳೂರು ಘಟಕದ ವತಿಯಿಂದ ಈ ಸೇವೆಯನ್ನು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೂ ಕಲ್ಪಿಸಿದ್ದರು. ಆಟೋ ಚಾಲಕರ ಶುಲ್ಕರಹಿತ ಪ್ರಯಾಣಿಕ ಸೇವೆಯು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ಆಟೋ ಚಾಲಕರು ಪಾಲ್ಗೊಂಡು ಭಕ್ತರನ್ನು ನಗರದ ಕೆಪಿಟಿ, ಬಂಟ್ಸ್ ವಸತಿ ನಿಲಯ, ಮಲ್ಲಿಕಟ್ಟೆ ಬಸ್ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಿಗೆ ಕರೆದ್ಯೊಯ್ದರು.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕದ್ರಿ ಶ್ರೀ ಮಂಜುನಾಥ ದೇವರ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಈ ಸೇವೆ ಮಾಡುತ್ತಿದ್ದೇವೆ. ಇಂಧನ ವೆಚ್ಚವನ್ನು ಚಾಲಕರೇ ಭರಿಸಿದ್ದಾರೆ. ದಿನಕ್ಕೆ ಸಾವಿರಾರು ರೂಪಾಯಿ ನಷ್ಟವಾದರೂ ದೇವರ ಸೇವೆ ಮಾಡಿದ ಶ್ರೇಯಸ್ಸು ಚಾಲಕರಿಗೆ ಇದೆ ಎಂದು ವಿಶ್ವ ಹಿಂದೂ ಪರಿಷತ್​ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಹೇಳಿದರು.

For All Latest Updates

TAGGED:

ABOUT THE AUTHOR

...view details