ಬಂಟ್ವಾಳ: ಸಿಡಿಲು ಬಡಿದು ಬಾಲಕ ಮೃತಪಟ್ಟಿರುವ ಘಟನೆ ನ.14ರ ರಾತ್ರಿ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಸಾಣೂರು ಪದವು ಗಣೇಶ್ ಆದಿದ್ರಾವಿಡ ಎಂಬವರ ಪುತ್ರ ಕಾರ್ತಿಕ್ (16) ಮೃತ ಬಾಲಕ.
ರಾತ್ರಿ 9 ಗಂಟೆ ಸುಮಾರಿಗೆ ಮನೆಯವರು ಊಟ ಮುಗಿಸಿ ಮಲಗಿದ್ದು, 9.30ರ ಸುಮಾರಿಗೆ ಜೋರಾಗಿ ಸಿಡಿಲು ಸಹಿತ ಮಳೆ ಬಂದಿದೆ. ಈ ವೇಳೆ, ಮಲಗಿದ್ದವರಿಗೆ ವಿದ್ಯುತ್ ಶಾಕ್ ಹೊಡೆದ ಅನುಭವ ಉಂಟಾಗಿದೆ. ಈ ವೇಳೆ, ಮನೆಯವರು ಹಾಲ್ಗೆ ಓಡಿ ಬಂದಿದ್ದು, ಕಾರ್ತಿಕ್ ಏಳದಿರುವುದನ್ನು ಕಂಡು ತಕ್ಷಣವೇ ಅವರನ್ನು ಕೈಕಂಬದ ಆಸ್ಪತ್ರೆಗೆ ಕರೆತರಲಾಗಿದೆ.