ಕರ್ನಾಟಕ

karnataka

ETV Bharat / state

ಭಾರತ್ ಬಂದ್​​ಗೆ ಮಂಗಳೂರಿನಲ್ಲಿ ಇಲ್ಲ ಬೆಂಬಲ: ಬಂದರು ಕಾರ್ಮಿಕರ ಸಾಂಕೇತಿಕ ಪ್ರತಿಭಟನೆ - ಮಂಗಳೂರಿನಲ್ಲಿ ಭಾರತ್ ಬಂದ್​​

ಭಾರತ ಬಂದ್ ಬೆಂಬಲಿಸಿ ಮಂಗಳೂರಿನ ಬಂದರ್ ನ ಕಾರ್ಮಿಕರು ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು‌. ಈ ಪ್ರತಿಭಟನೆಯಲ್ಲಿ ಕೃಷಿ ಕಾಯ್ದೆ ಮತ್ತು ಕಾರ್ಮಿಕ‌ ಕಾಯ್ದೆ ಹಿಂಪಡೆಯಲು ಒತ್ತಾಯಿಸಿದರು.

ಬಂದರು ಕಾರ್ಮಿಕರ ಸಾಂಕೇತಿಕ ಪ್ರತಿಭಟನೆ
ಬಂದರು ಕಾರ್ಮಿಕರ ಸಾಂಕೇತಿಕ ಪ್ರತಿಭಟನೆ

By

Published : Sep 27, 2021, 2:07 PM IST

ಮಂಗಳೂರು: ಕೇಂದ್ರ ಸರಕಾರದ ಕೃಷಿ ಕಾಯಿದೆ ವಿರೋಧಿಸಿ ಇಂದು‌ ಕರೆ ನೀಡಿರುವ ಭಾರತ ಬಂದ್​​​​ಗೆ ಮಂಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಭಾರತ್ ಬಂದ್ ಕರೆ ಕೊಟ್ಟರೂ ಜಿಲ್ಲೆಯಲ್ಲಿ ಜನಸಂಚಾರ, ವಾಹನ ಸಂಚಾರ ನಿರಾಳವಾಗಿ ನಡೆಯುತ್ತಿದೆ. ಬಸ್​​ಗಳ ಓಡಾಟ, ರಿಕ್ಷಾಗಳ ಓಡಾಟ, ಖಾಸಗಿ ವಾಹನಗಳ ಓಡಾಟ ನಿರಾತಂಕವಾಗಿದ್ದು, ಸಾರ್ವಜನಿಕರಿಗೆ ಬಂದ್​​​ನ ಬಿಸಿ ತಟ್ಟಿಲ್ಲ.

ಬಂದರು ಕಾರ್ಮಿಕರ ಸಾಂಕೇತಿಕ ಪ್ರತಿಭಟನೆ

ಇನ್ನು ಭಾರತ ಬಂದ್ ಬೆಂಬಲಿಸಿ ಮಂಗಳೂರಿನ ಬಂದರ್ ನ ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು‌. ಈ ಪ್ರತಿಭಟನೆಯಲ್ಲಿ ಕೃಷಿ ಕಾಯ್ದೆ ಮತ್ತು ಕಾರ್ಮಿಕ‌ ಕಾಯ್ದೆ ಹಿಂಪಡೆಯಲು ಒತ್ತಾಯಿಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಂತೇಶ್, ಕೃಷಿ ಕಾಯಿದೆ ಜಾರಿಯಾದರೆ ಕೃಷಿ ಮಾರುಕಟ್ಟೆಗಳು ಖಾಸಗಿ ಪಾಲಾಗಲಿದ್ದು, ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದರು. ಪ್ರತಿಭಟನೆಯ ನೇತೃತ್ವವನ್ನು ಬಂದರು ಶ್ರಮಿಕರ ಸಂಘದ ಮುಖಂಡ ಬಿ ಕೆ ಇಮ್ತಿಯಾಝ್ ಮೊದಲಾದವರು ಭಾಗವಹಿಸಿದ್ದರು.

ABOUT THE AUTHOR

...view details