ಮಂಗಳೂರು:ನಗರದ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಅತೀ ಬೃಹತ್ ಗಾತ್ರದ್ದೆನ್ನಲಾದ ವಿಮಾನವೊಂದು ಭೂಸ್ಪರ್ಶಿಸಿದೆ.
ಇಂಡಿಯನ್ ಏರ್ ಫೋರ್ಸ್‌ನ ಸಿ-17 ಗ್ಲೋಬ್ ಮಾಸ್ಟರ್ ಹೆಸರಿನ ವಿಮಾನ ಇದಾಗಿದ್ದು, ವಿಮಾನ ಒಟ್ಟು ನಾಲ್ಕು ಎಂಜಿನ್‌ಗಳನ್ನು ಹೊಂದಿದೆ. ಕುವೈತ್ನಿಂದ ಇತ್ತೀಚೆಗೆ ಎನ್ಎಂಪಿಟಿಗೆ ಬಂದಿರುವ ಆಕ್ಸಿಜನ್ ಟ್ಯಾಂಕರ್ಗಳು ಖಾಲಿಯಾದ ಬಳಿಕ ಅವುಗಳನ್ನು ಮರಳಿ ಕೊಂಡೊಯ್ಯಲು ಈ ವಿಮಾನ ಆಗಮಿಸಿದೆ.