ಬೆಳ್ತಂಗಡಿ:ಆಗಸ್ಟ್ 24ರಂದು ನಾಪತ್ತೆಯಾಗಿದ್ದ ತಾಲೂಕಿನ ನಾವೂರು ಗ್ರಾಮದ ನಾಗಜೆಯ ಯುವಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಬೆಳ್ತಂಗಡಿ: ನಾಪತ್ತೆಯಾಗಿದ್ದ ಯುವಕ ಶವವಾಗಿ ಮನೆ ಸಮೀಪದ ಕೆರೆಯಲ್ಲಿ ಪತ್ತೆ - ಬೆಳ್ತಂಗಡಿ ನಾಪತ್ತೆಯಾಗಿದ್ದ ಯುವಕ ಶವ ಪತ್ತೆ
ಆ. 24ರಂದು ವಾಪಸ್ ಕೆಲಸಕ್ಕೆ ತೆರಳಿದ್ದ ಯುವಕ ನಾಪತ್ತೆಯಾಗಿದ್ದ, ಆತನ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಸಂಬಂಧಿಕರು ಹುಡುಕಾಡಿದಾಗ ಮನೆ ಸಮೀಪದ ಕಾಡಿನಲ್ಲಿ ಬೈಕ್ ಮತ್ತು ಅಲ್ಲೇ ಸಮೀಪದಲ್ಲಿ ವಿಷದ ಬಾಟಲಿ ಪತ್ತೆಯಾಗಿತ್ತು. ಹೀಗಾಗಿ ಆತಂಕಗೊಂಡ ಕುಟುಂಬಸ್ಥರು ಸತತ ಹುಡುಕಾಟ ನಡೆಸಿದ್ದರು.
ರಕ್ಷಿತ್ (28) ಮೃತ ಯುವಕ. ಈತ ಕಳೆದ ಒಂಭತ್ತು ದಿನಗಳ ಹಿಂದೆಯಷ್ಟೇ ಖಾಸಗಿ ಸಂಸ್ಥೆಯೊಂದರ ಕೃಷಿ ಯಂತ್ರಧಾರಿತ ಯೋಜನೆಯ ಮ್ಯಾನೇಜರ್ ಆಗಿ ಚನ್ನರಾಯಪಟ್ಟಣದ ಸಮೀಪ ಉದ್ಯೋಗಕ್ಕೆ ಸೇರಿಕೊಂಡಿದ್ದ. ಆ. 22ರಂದು ಮನೆಗೆ ಬಂದ ರಕ್ಷಿತ್, ಆ. 24ರಂದು ವಾಪಸ್ ಕೆಲಸಕ್ಕೆ ತೆರಳಿದ್ದ. ಬಳಿಕ ನಾಪತ್ತೆಯಾಗಿದ್ದ. ಆತನ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಸಂಬಂಧಿಕರು ಹುಡುಕಾಡಿದಾಗ ಮನೆ ಸಮೀಪದ ಕಾಡಿನಲ್ಲಿ ಆತನ ಬೈಕ್ ಮತ್ತು ಅಲ್ಲೇ ಸಮೀಪದಲ್ಲಿ ವಿಷದ ಬಾಟಲಿ ಪತ್ತೆಯಾಗಿತ್ತು. ಹೀಗಾಗಿ ಆತಂಕಗೊಂಡ ಕುಟುಂಬಸ್ಥರು ಸತತ ಹುಡುಕಾಟ ನಡೆಸಿದ್ದರು.
ಇಂದು ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆ ಮಾಡಲಾಗಿದೆಯೋ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.