ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ಬೋಟ್‌ವೊಂದು ಭಾರಿ ಬಿರುಗಾಳಿಗೆ ಸಿಲುಕಿ ಓರ್ವ ಮೀನುಗಾರ ಸಮುದ್ರ ಪಾಲಾಗಿರುವ ಘಟನೆ ಪಣಂಬೂರು ಬೀಚ್ ಬಳಿ ನಡೆದಿದೆ.
ನಾಪತ್ತೆಯಾದ ಮೀನುಗಾರನನ್ನು ಕಸಬಾ ಬೆಂಗರೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ. ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಈ ತಂಡದ ಬೆಂಗರೆಯ ಅಝೀಝ್, ಇಮ್ತಿಯಾಝ್, ಸಿನಾನ್, ಫೈರೋಝ್ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ.