ಪುತ್ತೂರು: ಕೊರೊನಾ ಲಾಕ್‌ಡೌನ್‌ನಲ್ಲಿ ಸದಾ ಸಕ್ರೀಯರಾಗಿರುವ ಪೊಲೀಸರು ತುರ್ತು ಅವಶ್ಯಕತೆಗಳಿಗಾಗಿ ಬೇಕಾಗಿರುವ ರಕ್ತದ ಅಗತ್ಯತೆ ಮನಗಂಡು ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಮಾಡಿದ್ದಾರೆ.
ಲಾಕ್ಡೌನ್ ನಡುವೆಯೂ ಪುತ್ತೂರು ಪೊಲೀಸರಿಂದ ರಕ್ತದಾನ..! - ಕೊರೊನಾ ಲಾಕ್‌ಡೌನ್
ಕೊರೊನಾ ಲಾಕ್‌ಡೌನ್‌ನಲ್ಲಿ ಸದಾ ಸಕ್ರೀಯರಾಗಿರುವ ಪೊಲೀಸರು ತುರ್ತು ಅವಶ್ಯಕತೆಗಳಿಗಾಗಿ ಬೇಕಾಗಿರುವ ರಕ್ತದ ಅಗತ್ಯತೆ ಮನಗಂಡು ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಮಾಡಿದ್ದಾರೆ.
ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದೀಗ ಜನತೆ ಆಸ್ಪತ್ರೆಗೆ ಬರುವುದು ತೀರಾ ಕಡಿಮೆಯಾಗಿದೆ. ಅಪಘಾತ ಪ್ರಕರಣಗಳೂ ಇಲ್ಲ. ಹಾಗಿದ್ದರೂ ತುರ್ತು ಸಂದರ್ಭದ ದೃಷ್ಟಿಯಿಂದ ಮಾನವೀಯ ಕಳಕಳಿಯಿಂದ ಪುತ್ತೂರು ಪೊಲೀಸರು ರಕ್ತದಾನವನ್ನು ತಮ್ಮ ಕರ್ತವ್ಯದ ನಡುವೆಯೂ ನಡೆಸಿದ್ದಾರೆ. ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನಲ್ಲಿ ದಿನಕ್ಕೆ ಸರಾಸರಿ ಸುಮಾರು 15 ರಿಂದ 20 ಯುನಿಟ್ ರಕ್ತದ ಅಗತ್ಯವಿತ್ತು. ಆದರೆ, ಲಾಕ್‌ಡೌನ್ ಬಳಿಕ ಅಷ್ಟೊಂದು ರಕ್ತದ ಅವಶ್ಯಕತೆ ಇಲ್ಲದಿದ್ದರೂ ಕನಿಷ್ಠ 8 ರಿಂದ 10 ಯುನಿಟ್ ರಕ್ತದ ಅವಶ್ಯಕತೆ ಇದೆ.
ಆದರೆ, ಕೊರೊನಾ ಭೀತಿಯಿಂದ ಜನರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದು, ಅಗತ್ಯ ಪ್ರಮಾಣದ ರಕ್ತ ಸಂಗ್ರಹಿಸುವುದು ಕಷ್ಟವಾಗಿತ್ತು. ಹಾಗಾಗಿ ರಕ್ತದ ಕೊರತೆ ನೀಗಿಸಲು ಪುತ್ತೂರು ನಗರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸರು ರಕ್ತದಾನ ಮಾಡಿದ್ದಾರೆ. ವೃತ್ತ ನಿರೀಕ್ಷಕ ತಿಮ್ಮಪ್ಪನಾಯ್ಕ್, ಮಹಿಳಾ ಠಾಣೆಯ ಪೊಲೀಸ್ ಕುಸುಮಾದರ್ ಸೇರಿದಂತೆ ಪೊಲೀಸರು ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
TAGGED:
ಕೊರೊನಾ ಲಾಕ್ಡೌನ್