ಕರ್ನಾಟಕ

karnataka

ETV Bharat / state

ಬ್ಲ್ಯಾಕ್ ಫಂಗಸ್​ಗೆ ದ.ಕ.ಜಿಲ್ಲೆಯಲ್ಲಿ‌ ಮತ್ತೆ ಮೂವರು ಬಲಿ - ಬ್ಲ್ಯಾಕ್ ಫಂಗಸ್​

ಕಪ್ಪು ಶೀಲಿಂಧ್ರಕ್ಕೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮೃತಪಟ್ಟಿದ್ದಾರೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮಂದಿ ಬಲಿಯಾಗಿದ್ದು, ಆತಂಕ ಸೃಷ್ಟಿಯಾಗಿದೆ.

ಬ್ಲ್ಯಾಕ್ ಫಂಗಸ್​ಗೆ ದ.ಕ.ಜಿಲ್ಲೆಯಲ್ಲಿ‌ ಮತ್ತೆ ಮೂವರು ಬಲಿ
ಬ್ಲ್ಯಾಕ್ ಫಂಗಸ್​ಗೆ ದ.ಕ.ಜಿಲ್ಲೆಯಲ್ಲಿ‌ ಮತ್ತೆ ಮೂವರು ಬಲಿ

By

Published : May 27, 2021, 9:46 PM IST

ಮಂಗಳೂರು:ದಿನದಿಂದ ದಿನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಹೆಚ್ಚಾಗುತ್ತಿದ್ದು, ಇಂದು ಮೂವರು ಕಪ್ಪು ಮಾರಿಗೆ ಬಲಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಓರ್ವ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಒಬ್ಬ ರೋಗಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಕೆ.ಎಸ್.ಹೆಗ್ಡೆ, ಎ‌.ಜೆ.ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಈವರೆಗೆ 30 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು 5 ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ 25 ಸಕ್ರಿಯ ಪ್ರಕರಣಗಳಿವೆ. ಈ 25 ಮಂದಿಯಲ್ಲಿ 8 ಮಂದಿ ದ.ಕ.ಜಿಲ್ಲೆಯವರಾಗಿದ್ದು, ಉಳಿದವರು ಬೇರೆ ಜಿಲ್ಲೆಯವರಾಗಿದ್ದಾರೆ.

Colombo ಕಡಲ ತೀರದಲ್ಲಿ ಮುಳುಗುತ್ತಿರುವ ‘ಎಕ್ಸ್‌ಪ್ರೆಸ್‌ ಪರ್ಲ್‌’.. ಹೆಚ್ಚಿದ ಭೀತಿ!

ABOUT THE AUTHOR

...view details