ಪುತ್ತೂರು:ಸಾಮಾನ್ಯ ಕಾರ್ಯಕರ್ತ ಕೂಡಾ ಶಾಸಕನಾಗಲು, ಸಚಿವನಾಗಲು, ಮುಖ್ಯಮಂತ್ರಿಯಾಗಲು, ಪ್ರಧಾನಮಂತ್ರಿಯಾಗಲು ಅವಕಾಶವಿರುವ ಏಕೈಕ ಪಕ್ಷ ಬಿಜೆಪಿ. ಬಿಜೆಪಿಯ ಕಾರ್ಯಕರ್ತರು ಸಂಘಟನೆಯ ಜೀವಾಳವಾಗಿದ್ದಾರೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ದ.ಕ. ಜಿಲ್ಲೆಯಲ್ಲಿ ಬಿಜೆಪಿಯ ರಾಜಕೀಯ ಶಕ್ತಿ ಆಳವಾಗಿ ಬೇರು ಬಿಟ್ಟಿದೆ: ಸಚಿವ ಮಾಧುಸ್ವಾಮಿ - BJP's political power is deeply rooted in Dakshina kannada district: Minister Madhuswamy
ಪುತ್ತೂರು ಮಂಡಲ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಚಿವ ಮಾಧುಸ್ವಾಮಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ .
ಶನಿವಾರ ಪುತ್ತೂರು ಮಂಡಲ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆ ಮತ್ತು ಎಲ್ಲಾ ಹಂತಗಳಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗು ಇಲ್ಲಿಯ ಕಾರ್ಯ ವಿಧಾನಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಸಂಘ ಪರಿವಾರದ ಶಕ್ತಿ ಕೇಂದ್ರವಾದ ದ.ಕ. ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನೆ ಮತ್ತು ರಾಜಕೀಯ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಜನಸಂಘ ಕಾಲದಿಂದಲೂ ಹಲವು ಹೋರಾಟಗಳನ್ನು ನಡೆಸಿ ಬಿಜೆಪಿ ಇಂದು ಮತದಾರರಿಂದ ಮನ್ನಣೆ ಪಡೆದಿದೆ. ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಕುರಿತು ಚರ್ಚೆಗಳು ನಡೆಯುವ ಸಂದರ್ಭ ದ.ಕ. ಜಿಲ್ಲೆಯನ್ನು ಉದಾಹರಿಸಿ ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ. ದ.ಕ. ಜಿಲ್ಲೆಯಲ್ಲಿ ಬಿಜೆಪಿಯ ರಾಜಕೀಯ ಶಕ್ತಿ ಆಳವಾಗಿ ಬೇರು ಬಿಟ್ಟಿದೆ ಎಂದರು.