ಕರ್ನಾಟಕ

karnataka

ETV Bharat / state

ಪಾಲಿಕೆಯಲ್ಲಿ ಜನಪರ ಬಜೆಟ್ ನೀಡುವಲ್ಲಿ ಬಿಜೆಪಿ ವಿಫಲ: ವಿಪಕ್ಷ ನಾಯಕ ಅಬ್ದುಲ್ ರವೂಫ್ - ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು ಪಾಲಿಕೆಯಲ್ಲಿ ಮಂಡಿಸಿದ ಬಜೆಟ್​​ನಲ್ಲಿ ಆಸ್ತಿ ತೆರಿಗೆ, ನೀರಿನ ಬಿಲ್, ಘನತ್ಯಾಜ್ಯ ಸೆಸ್, ಟ್ರೇಡ್ ಲೈಸೆನ್ಸ್ ತೆರಿಗೆ ಹೆಚ್ಚಳ ಮಾಡಲಾಗಿದೆ. ಜನರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ತೆರಿಗೆ ಹೆಚ್ಚಳ ಮಾಡಿರೋದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ ವಾಗ್ದಾಳಿ ನಡೆಸಿದ್ದಾರೆ.

Rauf
ರವೂಫ್

By

Published : Jan 29, 2021, 3:49 PM IST

ಮಂಗಳೂರು:ಮಹಾನಗರ ಪಾಲಿಕೆಯಲ್ಲಿ ನಿನ್ನೆ ಮಂಡಿಸಿದ ಬಜೆಟ್ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನಪರ ಬಜೆಟ್ ಮಂಡಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.

ಪಾಲಿಕೆಯಲ್ಲಿ ಜನಪರ ಬಜೆಟ್ ನೀಡುವಲ್ಲಿ ಬಿಜೆಪಿ ವಿಫಲ: ವಿಪಕ್ಷ ನಾಯಕ ಅಬ್ದುಲ್ ರವೂಫ್
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಪಾಲಿಕೆಯಲ್ಲಿ ಮಂಡಿಸಿದ ಬಜೆಟ್​​ನಲ್ಲಿ ಆಸ್ತಿ ತೆರಿಗೆ, ನೀರಿನ ಬಿಲ್, ಘನತ್ಯಾಜ್ಯ ಸೆಸ್, ಟ್ರೇಡ್ ಲೈಸೆನ್ಸ್ ತೆರಿಗೆ ಹೆಚ್ಚಳ ಮಾಡಲಾಗಿದೆ. ಜನರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ತೆರಿಗೆ ಹೆಚ್ಚಳ ಮಾಡಿರೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದು, ಮಾರ್ಚ್​​ನಿಂದ ಜುಲೈವರೆಗೆ ನೀರಿನ ಬಿಲ್ ಮನ್ನಾ ಮಾಡುವಂತೆ ಪಾಲಿಕೆಗೆ ಕಾಂಗ್ರೆಸ್ ನಿಯೋಗ ಮನವಿ ಮಾಡಿತ್ತು. ಆದರೆ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದರು.

ABOUT THE AUTHOR

...view details