ಕರ್ನಾಟಕ

karnataka

ETV Bharat / state

BJPಗರು ಕೋವಿಡ್ ಕಂಟ್ರೋಲ್ ಮಾಡದೇ ಮೋದಿ ಇಮೇಜ್ ಡ್ಯಾಮೇಜ್​ ಕಂಟ್ರೋಲ್ ಮಾಡ್ತಿದ್ದಾರೆ: ಎಂಎಲ್​ಸಿ ಹರೀಶ್​ ಕುಮಾರ್ - ಹರೀಶ್ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿಗರು ಕೊರೊನಾ ಕಂಟ್ರೋಲ್​ ಮಾಡುವ ಬದಲು ಪ್ರಧಾನಿ ಮೋದಿ ಇಮೇಜ್​ ಡ್ಯಾಮೇಜ್​​ ಆಗುವುದನ್ನು ಕಂಟ್ರೋಲ್ ಮಾಡ್ತಾ ಇದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ರು.

harish
harish

By

Published : May 28, 2021, 9:23 PM IST

Updated : May 28, 2021, 9:50 PM IST

ಮಂಗಳೂರು; ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ವೈಫಲ್ಯವಾಗಿದೆ. ಬಿಜೆಪಿ ಕೊರೊನಾ ಕಂಟ್ರೋಲ್ ಮಾಡಲು ಪ್ರಯತ್ನಿಸ್ತಾ ಇಲ್ಲ. ಮೋದಿ ಅವರ ಇಮೇಜ್​ಗೆ ಡ್ಯಾಮೇಜ್ ಆಗುವುದನ್ನು ಕಂಟ್ರೋಲ್ ಮಾಡ್ತಾ ಇದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ಹೇಳುವುದು ಮತ್ತು ಸರ್ಕಾರದ ವೈಫಲ್ಯಗಳನ್ನು ಹೇಳುವುದು ಜನರ ಹಾದಿ ತಪ್ಪಿಸುವ ಕೆಲಸವಲ್ಲ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಪಕ್ಷ ಜನರ ಹಾದಿ ತಪ್ಪಿಸುತ್ತಿದೆ ಎಂದು ಹೇಳಿದ್ದಾರೆ. ಇದು ಅವರಿಗೆ ಶೋಭೆ ತರುವ ವಿಚಾರವಲ್ಲ . ಜನತೆಯ ಆಕ್ರೋಶ ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗ್ತಿಲ್ಲ. ಕೊರೊನಾ ನಿರ್ವಹಣೆ ಮಾಡಲಾಗದೇ ಜನರನ್ನು ಇವರು ಸಂಕಷ್ಟಕ್ಕೆ ದೂಡಿದ್ದಾರೆ. ಇವರ ಡಬಲ್ ಇಂಜಿನ್​ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರ ಮತ್ತು ಪಕ್ಷ ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕಿತ್ತೋ ಅದಕ್ಕಿಂತ ಉತ್ತಮವಾಗಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಣೆ ಮಾಡಿದೆ. ಜಿಲ್ಲಾ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು ಜನರ ಸಂಕಷ್ಟಕ್ಕೆ ನೆರವಾಗುತ್ತಿದೆ ಎಂದರು.

ಎಂಎಲ್​ಸಿ ಹರೀಶ್​ ಕುಮಾರ್

ಲಸಿಕೆಗೆ ಕಾಂಗ್ರೆಸ್ ವಿರೋಧಿಸಿಲ್ಲ:

ಲಸಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಲಸಿಕೆಗೆ ವಿರೋಧ ವ್ಯಕ್ತಪಡಿಸಿಲ್ಲ. ಲಸಿಕೆಯನ್ನು ಆರಂಭದಲ್ಲಿ ನೀಡುವಾಗ ಗ್ರೂಪ್ ಡಿ ನೌಕರರಿಗೆ ನೀಡುವ ಬದಲಿಗೆ ಶಾಸಕ, ಸಂಸದ, ಪ್ರಧಾನಮಂತ್ರಿಗಳಿಗೆ ನೀಡಲಿ ಎಂದು ಯು ಟಿ ಖಾದರ್ ಸೇರಿದಂತೆ ಕಾಂಗ್ರೆಸ್ ಪಕ್ಷದವರು ಆಗ್ರಹಿಸಿದ್ದರು. ಗ್ರೂಪ್ ಡಿ ನೌಕರರ ಬದಲು ಪ್ರಧಾನಮಂತ್ರಿ ಸೇರಿದಂತೆ ಜನಪ್ರತಿನಿಧಿಗಳಿಗೆ ನೀಡಿದರೆ ಜನರಿಗೆ ಲಸಿಕೆ ತೆಗೆದುಕೊಳ್ಳಲು ಧೈರ್ಯ ಬರುತ್ತಿತ್ತು. ಆ ಕೆಲಸವನ್ನು ಆ ಸಂದರ್ಭದಲ್ಲಿ ಅವರು ಮಾಡಿಲ್ಲ ಎಂದರು.

Last Updated : May 28, 2021, 9:50 PM IST

ABOUT THE AUTHOR

...view details