ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಗರದ ಲೇಡಿಹಿಲ್‌ನಲ್ಲಿರುವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಬೂತ್ ಸಂಖ್ಯೆ 206 ರಲ್ಲಿ ಮತ ಚಲಾಯಿಸಿದರು.
ಮಂಗಳೂರು ಮನಪಾ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ ಚಲಾವಣೆ - BJP state president voted in Mangalore
ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಗರದ ಲೇಡಿಹಿಲ್‌ನಲ್ಲಿರುವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಬೂತ್ ಸಂಖ್ಯೆ 206 ರಲ್ಲಿ ಮತ ಚಲಾಯಿಸಿದರು.
ಮತದಾನದ ಬಳಿಕ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರರ ಒಲವು ಬಿಜೆಪಿ ಪರ ಇದೆ. ಜನರು ವಿಶ್ವಾಸ, ನಂಬಿಕೆಯಿಂದ ಬಿಜೆಪಿಗೆ ಅಧಿಕಾರ ನೀಡಿದಲ್ಲಿ ಖಂಡಿತ ಅಭಿವೃದ್ಧಿಯಾಗುತ್ತದೆ. ದಾವಣಗೆರೆ ಹಾಗೂ ಮಂಗಳೂರು ಮನಪಾ ಚುನಾವಣೆ ನಡೆಯುತ್ತಿದ್ದು, ಎರಡರಲ್ಲಿಯೂ ಬಿಜೆಪಿ ಅಧಿಕಾರವಹಿಸುತ್ತದೆ ಎಂದು ನಂಬಿಕೆಯಿದೆ. ಅತಿ ಹೆಚ್ಚು ನಗರ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಗಳಲ್ಲಿ ನಾವು ಅಧಿಕಾರವನ್ನು ಹಿಡಿಯುತ್ತೇವೆ. ಒಟ್ಟು ವಾತಾವರಣ ಬಿಜೆಪಿ ಪರವಿದೆ. ಕಳೆದ ಬಾರಿ ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತೋ, ಅಲ್ಲೆಲ್ಲ ಜನವಿರೋಧಿ ಆಡಳಿತ ನಡೆದಿದೆ ಎಂದು ಹೇಳಿದರು.
ಮಂಗಳೂರು ಮನಪಾದಲ್ಲಿ ಕಾಂಗ್ರೆಸ್ ದುರಾಡಳಿತ, ದುರ್ವ್ಯವಸ್ಥೆ, ಅನುದಾನಗಳ ಅಸಮರ್ಪಕ ಬಳಕೆ, ಭ್ರಷ್ಟಾಚಾರ, ನೀರಿಗೆ ಅತಿ ಹೆಚ್ಚು ತೆರಿಗೆ, ಸ್ಮಾರ್ಟ್ ಸಿಟಿ, ಅಮೃತ ಯೋಜನೆಗಳ ಸಮರ್ಪಕವಾಗಿ ಬಳಕೆ ಮಾಡದೆ ಇರುವಂಥದ್ದು, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ನೊಳಗೆ ನಡೆದ ಆಂತರಿಕ ಜಗಳಗಳನ್ನು ನೋಡಿ ಜನ ರೋಸಿ ಹೋಗಿದ್ದಾರೆ. ಹಿಂದಿನ ರಾಜಕೀಯ ವ್ಯವಸ್ಥೆಗೂ ಇಂದಿನ ರಾಜಕೀಯ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಬೇರೆ ಬೇರೆ ಕಾರಣಗಳಿಂದ ಮಂಗಳೂರು ಮಹಾನಗರ ಪಾಲಿಕೆಯನ್ನು ಕಳೆದುಕೊಂಡಿದ್ದೆವು. ಆದರೆ ಕಳೆದ ಬಾರಿಯ ಲೋಕಸಭಾ, ವಿಧಾಸಭಾ ಚುನಾವಣೆಯಲ್ಲಿ ಬಿಜೆಪಿ ಅಬೂತಪೂರ್ವ ಯಶಸ್ಸು ಸಾಧಿಸಿತ್ತು. ಆದ್ದರಿಂದ ಈ ಬಾರಿಯೂ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.