ಕರ್ನಾಟಕ

karnataka

ETV Bharat / state

ಭಯೋತ್ಪಾದಕರ ಮೇಲೆ ಡಿಕೆಶಿ ಪ್ರೇಮ ಜಗಜ್ಜಾಹೀರು: ಕಟೀಲ್ - ಈಟಿವಿ ಭಾರತ ಕನ್ನಡ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಯೋತ್ಪಾದಕರ ಸಮರ್ಥನೆಗೆ ನಿಂತಿದ್ದು ನಾಚಿಕೆಗೇಡಿನ‌ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

bjp-state-president-nalinkumar-slams-kpcc-state-president-dk-shivkumar
ಡಿಕೆಶಿಯ ಭಯೋತ್ಪಾದಕರ ಮೇಲಿನ ಪ್ರೇಮ ಜಗಜ್ಜಾಹೀರು : ಕಟೀಲ್

By

Published : Dec 15, 2022, 7:04 PM IST

ಬೆಂಗಳೂರು: ಬಿಜೆಪಿಗೆ ಬೈಯ್ಯುವ ಭರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರುವುದು ಇದೇ ಮೊದಲಲ್ಲ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ವಿಷಯ ಭಯೋತ್ಪಾದನೆಗೆ ಸರಿಯಲ್ಲ ಎಂಬಂತೆ ಮಾತನಾಡುವ ಇವರು ಅಧಿಕಾರಕ್ಕೆ ಬಂದ ನಂತರ ಜನರ ರಕ್ಷಣೆಗೆ ಎಷ್ಟರಮಟ್ಟಿಗೆ ಟೊಂಕ ಕಟ್ಟಿ ನಿಲ್ಲಬಹುದು? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿತ್ತು: ಬಾಟ್ಲಾಹೌಸ್ ಪ್ರಕರಣದಲ್ಲೂ ಕಾಂಗ್ರೆಸ್‌ನ ಅಂದಿನ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಕ್ಕಾಗಿ ಅತ್ತಿದ್ದು ಯಾರಿಗೆ ನೆನಪಿಲ್ಲ?. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿತ್ತು. ನಾವು ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದನೆಯನ್ನು ಗುರಿಯಾಗಿಸಲು ಹೇಳಿದ್ದೆವು. ಆದರೆ ಅವರು ನನ್ನನ್ನು ಗುರಿಯಾಗಿಸಿದ್ದರು. ಅವರಿಗೆ ಮತಬ್ಯಾಂಕ್ ರಾಜಕಾರಣವೇ ಮುಖ್ಯವಾಗಿತ್ತು ಎಂದು ಪ್ರಧಾನಿ ಸರಿಯಾಗಿಯೇ ಹೇಳಿದ್ದಾರೆ ಎಂದಿದ್ದಾರೆ

ಇದನ್ನೂ ಓದಿ:ಕುಕ್ಕರ್ ಸ್ಫೋಟ ಸಂಬಂಧ ಡಿಕೆಶಿ ಹೇಳಿಕೆ ಖಂಡನೀಯ: ಆರಗ ಜ್ಞಾನೇಂದ್ರ ಗರಂ

ABOUT THE AUTHOR

...view details