ಮಂಗಳೂರು: ನಗರ ಪಾಲಿಕೆ ಚುನಾವಣೆ ಏಳು ತಿಂಗಳ ಬಳಿಕ ನಡೆಯುತ್ತಿದೆ. ಈ ಚುನಾವಣೆ ತಡವಾಗಿ ನಡೆಯಲು ಬಿಜೆಪಿ ಮೀಸಲಾತಿ ಪ್ರಶ್ನಿಸಿ ಕೋರ್ಟ್ಗೆ ಹೋಗಿದ್ದೇ ಕಾರಣ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಆರೋಪಿಸಿದ್ದಾರೆ
ಪಾಲಿಕೆ ಚುನಾವಣೆ ವಿಳಂಬವಾಗಲು ಬಿಜೆಪಿ ಕಾರಣ: ಐವನ್ ಡಿಸೋಜಾ
ಮೀಸಲಾತಿ ಪ್ರಶ್ನಿಸಿ ಬಿಜೆಪಿ ಕೋರ್ಟ್ ಮೆಟ್ಟಲೇರಿದ್ದೇ ಪಾಲಿಕೆ ಚುನಾವಣೆ ವಿಳಂಬವಾಗಲು ಕಾರಣ ಎಂದು ಐವನ್ ಡಿಸೋಜಾ ಆರೋಪಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆಸಬಾರದು, ಜನಪ್ರತಿನಿಧಿಗಳ ಆಡಳಿತ ಇರಬಾರದು ಎನ್ನುವ ಬಿಜೆಪಿಗೆ ಪ್ರಜಾತಂತ್ರದ ಮೇಲೆ ನಂಬಿಕೆ ಇದ್ದಿದ್ದರೆ ಚುನಾವಣೆಯನ್ನು ಇಷ್ಟು ವಿಳಂಬ ಮಾಡುತ್ತಿರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಐದು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ, ಜನವಿರೋಧಿ ನೀತಿಯನ್ನು ಅನುಸರಿಸದೇ ಆಡಳಿತ ನಡೆಸಿದೆ. ಅಲ್ಲದೆ ಕಳೆದ ಚುನಾವಣೆಯ ಸಂದರ್ಭ ಜನರಿಗೆ ನೀಡಿರುವ ಎಲ್ಲ ಭರವಸೆಯನ್ನು ಈಡೇರಿಸಿದ್ದೇವೆ. ಒಳ್ಳೆಯ ಆಡಳಿತ ನೀಡಿದ್ದೇವೆ. ಹೀಗಾಗಿ ಜನರು ನಮ್ಮನ್ನು ಖಂಡಿತಾ ಬೆಂಬಲಿಸುತ್ತಾರೆ. ಕಳೆದ ಬಾರಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೆವು. ಈ ಬಾರಿ 60 ಕ್ಕೆ 60 ರಲ್ಲೂ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿ ಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.