ಕರ್ನಾಟಕ

karnataka

ETV Bharat / state

ಸಮ್ಮಿಶ್ರ ಸರ್ಕಾರ ಪತನದ ಹಿಂದೆ ನಾವಿಲ್ಲವೆಂದು ಬಿಜೆಪಿ ಜನರನ್ನು‌ ಮೂರ್ಖರನ್ನಾಗಿಸುತ್ತಿದೆ.. ಯು ಟಿ ಖಾದರ್ ಕಿಡಿ - ಮಂಗಳೂರು, ಹಂಗಾಮಿ ಸಚಿವ ಯುಟಿ ಖಾದರ್, ಸುದ್ದಿಗೋಷ್ಠಿ, ಬಿಜೆಪಿ ಸತ್ಯ ಒಪ್ಪಿಕೊಳ್ಳಲಿ, ನಗರದ ಸರ್ಕ್ಯೂಟ್ ಹೌಸ್ , ಜೆಡಿಎಸ್ ಹಾಗೂ ಕಾಂಗ್ರೆಸ್ , ಕನ್ನಡ ವಾರ್ತೆ, ಈಟಿವಿ ಭಾರತ

ಅತೃಪ್ತರು ಎಲ್ಲಿಗೆ ಬೇಕಾದರೂ ತೆರಳಲಿ. ಆದರೆ, ಒಬ್ಬೊಬ್ಬರಿಗೆ ವಿಶೇಷ ವಿಮಾನ ಯಾಕೆ ಮಾಡಬೇಕು. ಶಾಸಕರನ್ನು ಬಾಂಬೆಯಲ್ಲಿರಿಸಿದ್ದು ಯಾರು, ಅಲ್ಲಿ ಪೊಲೀಸರನ್ನು ಕಳುಹಿಸಿದ್ದು ಯಾರು, ಬಿಜೆಪಿಯವರಲ್ಲವೇ.. ತಮ್ಮೊಂದಿಗೆ ಮೈತ್ರಿ ಸರ್ಕಾರದ ಶಾಸಕರು ಬಂದಿದ್ದಾರೆ. ನಾವು ಕರೆದುಕೊಂಡು ಹೋಗಿದ್ದೇವೆ ಎಂಬ ಸತ್ಯ ಬಿಜೆಪಿಯವರು ಒಪ್ಪಿಕೊಳ್ಳಲಿ ಎಂದು ಹಂಗಾಮಿ ಸಚಿವ ಯು ಟಿ ಖಾದರ್ ಹೇಳಿದರು.

ಹಂಗಾಮಿ ಸಚಿವ ಯು.ಟಿ ಖಾದರ್

By

Published : Jul 24, 2019, 9:34 PM IST

ಮಂಗಳೂರು: ಬಿಜೆಪಿಯವರು ಸಮ್ಮಿಶ್ರ ಸರ್ಕಾರದ ಪತನದ ಹಿಂದೆ ತಮ್ಮ ಕೈವಾಡ ಇಲ್ಲ ಎಂದು ಹೇಳುತ್ತಾ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಹಂಗಾಮಿ ಸಚಿವ ಯು ಟಿ ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮೊಂದಿಗೆ ಮೈತ್ರಿ ಸರ್ಕಾರದ ಶಾಸಕರು ಬಂದಿದ್ದಾರೆ. ನಾವು ಕರೆದುಕೊಂಡು ಹೋಗಿದ್ದೇವೆ ಎಂಬ ಸತ್ಯ ಒಪ್ಪಿಕೊಳ್ಳಲಿ. ಸಮ್ಮಿಶ್ರ ಸರ್ಕಾರ ಪತನದ ಹಿಂದೆ ಒಂದು ಸಾವಿರ ಕೋಟಿಯ ಹಗರಣ ನಡೆದಿದೆ‌. ಮೂವರು ನನಗೆ ಕೋಟಿಗಟ್ಟಲೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡರೇ ಹೇಳಿದ್ದಾರೆ. ಅಂತವರ ಮೇಲೆ ಸುಮೊಟೋ ಪ್ರಕರಣ ದಾಖಲಿಸಲಿ. ಮೂರು ತಿಂಗಳು ಅವಕಾಶ ನೀಡಿ, ಮುಂಬೈಯಲ್ಲಿರುವ ಶಾಸಕರೇ ಬಂದು ಇದರಲ್ಲಿ ಎಷ್ಟು ಕೋಟಿಗಳ ಹಗರಣ ಇದೆ ಎಂಬ ವಿಷಯ ಬಹಿರಂಗಪಡಿಸಲಿದ್ದಾರೆ ಎಂದು ಹೇಳಿದರು.

ಕುಟುಂಬದಲ್ಲಿ ಸಣ್ಣಪುಟ್ಟ ಕಲಹ ಉಂಟಾಗುವುದು ಸಾಮಾನ್ಯ. ಬೇರೆಯವರು ಬಂದು ಹುಳಿ ಹಿಂಡಿದಾಗ ಅದು ಜಾಸ್ತಿಯಾಗುತ್ತದೆ. ಅಂತಹ ಕೆಲಸ ಇಲ್ಲಿ‌ ಆಗಿದೆ‌. ನಾವು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ. ಈ ಎರಡರ ವಿರುದ್ಧವಾಗಿ ಹೋದವರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡುವ ಕೆಲಸ ಆಗಬೇಕು ಎಂದರು.

ಕಳೆದ ಚುನಾವಣೆಯಲ್ಲಿ ಈ ರಾಜ್ಯದ ಜನತೆ ಒಂದೇ ಪಕ್ಷಕ್ಕೆ ಬಹುಮತ ನೀಡಿಲ್ಲ. ಸಮ್ಮಿಶ್ರ ಸರ್ಕಾರವೇ ಆಗಬೇಕೆಂದು ಜನಾದೇಶ ನೀಡಿದ್ದಾರೆ. ತತ್ವ, ಅಭಿಪ್ರಾಯ ಹಾಗೂ ಕಾನೂನು ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿತು. ಮೊದಲಿಗೆ ಬಿಜೆಪಿಗೆ ಅಧಿಕಾರ ನೀಡಲಾಗಿತ್ತು. ಅವರಿಂದ ಅದನ್ನು ಉಳಿಸಿಕೊಳ್ಳಲು ಆಗಿಲ್ಲ. ಆ ಸಂದರ್ಭದಲ್ಲಿ ನಡೆದ ಹಗರಣಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ತಿಳಿಸಿದರು.

ಹಂಗಾಮಿ ಸಚಿವ ಯು ಟಿ ಖಾದರ್

ಇಂದು ಅತೃಪ್ತರು ಎಲ್ಲಿಗೆ ಬೇಕಾದರೂ ತೆರಳಲಿ. ಆದರೆ, ಅವರಿಗೆ ಒಬ್ಬೊಬ್ಬರಿಗೆ ವಿಶೇಷ ವಿಮಾನ ಯಾಕೆ ಮಾಡಬೇಕು. ಶಾಸಕರನ್ನು ಬಾಂಬೆಯಲ್ಲಿರಿಸಿದ್ದು ಯಾರು, ಅಲ್ಲಿ ಪೊಲೀಸರನ್ನು ಕಳುಹಿಸಿದ್ದು ಯಾರು, ಬಿಜೆಪಿಯವರಲ್ಲವೇ.. ವಿದೇಶದಿಂದ ಬಂದವರಿಗೆ ಬಾಂಬೆಯಲ್ಲಿ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಲಾಗುತ್ತದೆ. ಆದರೆ, ಪಕ್ಕದ ಕರ್ನಾಟಕ ರಾಜ್ಯದಿಂದ ಬಂದ ಶಾಸಕ, ಸಚಿವರಿಗೆ ಯಾಕೆ ಕನಿಷ್ಠ ಸೌಜನ್ಯವೂ ಸಿಗುತ್ತಿಲ್ಲ. ಇದರ ಹಿಂದೆ ಮಹಾರಾಷ್ಟ್ರ ಸರ್ಕಾರದ ಉದ್ದೇಶವೇನಿದೆ ಎಂದು ಯು ಟಿ ಖಾದರ್ ಪ್ರಶ್ನಿಸಿದರು.

ನಾನು ಪ್ರಥಮ ಬಾರಿ ಮಂತ್ರಿಯಾಗಿ ರಾಜ್ಯಪಾಲರ ಮುಂದೆ ಸಹಿ ಮಾಡುವಾಗ ಎಷ್ಟು ಸಂತೋಷವಾಗಿತ್ತೋ, ಈಗ ಪಕ್ಷಕ್ಕಾಗಿ ರಾಜೀನಾಮೆ ನೀಡುವಾಗಲೂ ಅಷ್ಟೇ ಸಂತೋಷವಾಗಿದೆ. ನನ್ನ ಕ್ಷೇತ್ರದ ಜನತೆ ನನ್ನನ್ನು ಆಶೀರ್ವಾದ ಮಾಡಿದರೆ, ಯಾವಾಗ ಬೇಕಾದರೂ ಮಂತ್ರಿಯಾಗಬಹುದು. ಪಕ್ಷ ಕಷ್ಟದಲ್ಲಿರುವಾಗ ಅಧಿಕಾರ ತ್ಯಾಗ ಮಾಡುವ ಸಂದರ್ಭ ಕಡಿಮೆ ಸಿಗುತ್ತದೆ. ಅಂತಹ ಅವಕಾಶ ಈಗ ಸಿಕ್ಕಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details