ಕರ್ನಾಟಕ

karnataka

ETV Bharat / state

ಗೋಮಾಂಸ ರಪ್ತು ಮಾಡುವವರಿಂದ ಬಿಜೆಪಿಗೆ ಸ್ಪಾನ್ಸರ್: ಯು ಟಿ ಖಾದರ್ ಆರೋಪ - Karnataka beef exporters

ರಾಜ್ಯದಲ್ಲಿ ಇರುವ 11 ಗೋಮಾಂಸ ರಫ್ತು ಮಾಡುವ ಫ್ಯಾಕ್ಟರಿಗಳಿಂದ ಬಿಜೆಪಿಗೆ ಸ್ಪಾನ್ಸರ್ ಸಿಗುತ್ತಿದೆ. ಈ ಗೋಮಾಂಸ ಫ್ಯಾಕ್ಟರಿಗಳನ್ನು ಏಕೆ ರದ್ದುಪಡಿಸುವುದಿಲ್ಲ ಎಂದು ವಿಪಕ್ಷ ಉಪನಾಯಕ ಯುಟಿ ಖಾದರ್ ಮಂಗಳೂರಿನಲ್ಲಿ ಪ್ರಶ್ನಿಸಿದ್ದಾರೆ.

bjp government sponsored by beef exporters
ವಿಪಕ್ಷ ಉಪನಾಯಕ ಯು.ಟಿ ಖಾದರ್

By

Published : Nov 8, 2022, 6:01 PM IST

ಮಂಗಳೂರು:ರಾಜ್ಯದಲ್ಲಿ 11 ಗೋಮಾಂಸ ರಪ್ತು ಮಾಡುವ ಫ್ಯಾಕ್ಟರಿಗಳಿವೆ. ಈ ಫ್ಯಾಕ್ಟರಿಗಳಿಂದ ಗೋಮಾಂಸಗಳು ರಫ್ತು ಆಗುತ್ತದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಪ್ರಾಯೋಜಕತ್ವ ಇದೆ. ಆದ್ದರಿಂದ ಗೋಮಾಂಸ ಫ್ಯಾಕ್ಟರಿಗಳನ್ನು ರದ್ದುಪಡಿಸುವುದಿಲ್ಲ ಎಂದು ಹೇಳಿದರು.

ಸೆಂಟ್ರಲ್ ಮಾರ್ಕೆಟ್​ನಲ್ಲಿ ವಿವಾದ ಬಗ್ಗೆ ಮಾತನಾಡಿದ ಖಾದರ್, ರಾಜ್ಯದಲ್ಲಿ ಮಾಡಿರುವ ಗೋವಧೆ ನಿಯಂತ್ರಣ ಕಾನೂನು ಇಂದಿರಾಗಾಂಧಿ ಅವರು ತಂದ ಕಾನೂನನ್ನೇ ಸ್ವಲ್ಪ ಬದಲಾಯಿಸಲಾಗಿದೆ. ಇಂದಿರಾಗಾಂಧಿ ಸರ್ಕಾರ ದೇಶದಲ್ಲಿ ಒಂದೆ ಕಾನೂನನ್ನು ತಂದರು. ಆದರೆ, ಬಿಜೆಪಿಯಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ಕಾನೂನು. ಬಿಜೆಪಿಯವರಿಗೆ ಕೇರಳ, ತಮಿಳುನಾಡು, ಗೋವ, ಈಶಾನ್ಯ ರಾಜ್ಯಗಳಲ್ಲಿ ಗೋವು ತಿನ್ನಬಹುದು. ಕರ್ನಾಟಕದಲ್ಲಿ ತಿನ್ನಬಾರದು. ದೇಶದ ಇತರಡೆಗಳಲ್ಲಿ ಕಾನೂನು ತರಲು ಯಾವ ಮತಗಳ ಭಯ ಇದೆ ಎಂದು ಪ್ರಶ್ನಿಸಿದರು.

ಎನಿದೂ ಸೆಂಟ್ರಲ್ ಮಾರ್ಕೆಟ್ ವಿವಾದ:ಸೆಂಟ್ರಲ್ ಮಾರ್ಕೆಟ್​ನಲ್ಲಿ 9 ಗೋಮಾಂಸ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವ ಮಂಗಳೂರು ನಗರ ಪಾಲಿಕೆ ವಿರುದ್ಧ ವಿಶ್ವಹಿಂದೂ ಪರಿಷತ್ (ವಿಹೆಚ್​ಪಿ) ಅಕ್ರೋಶ ಹೋರಹಾಕಿತ್ತು.


ಕಾಂಗ್ರೆಸ್ ಸಕಾರ್ರದಿಂದ ಪಶುಭಾಗ್ಯ:ಗೋರಕ್ಷಣೆ ಎಂದು ಹೇಳುವ ಬಿಜೆಪಿ ಸರ್ಕಾರ ಗೋಸಂತತಿ ವೃದ್ದಿಗೆ ಯಾವ ಕ್ರಮ ಕೈಗೊಂಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಪಶುಭಾಗ್ಯ ಯೋಜನೆಯಲ್ಲಿ ಉಚಿತವಾಗಿ ನೀಡಿ ಅದರ ಸಂತತಿಯನ್ನು ಹೆಚ್ಚಿಸಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆ ಇಲ್ಲ. ಕಪಿಲ ಗೋಶಾಲೆಯನ್ನು ಒಡೆದು ಬೀದಿಗೆ ಹಾಕಲಾಗಿದೆ. ಕಪಿಲ ತಳಿಯ ಗೋವನ್ನು ಸಾಕಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಬದಲು ಆತನನ್ನು ರೌಡಿಯಂತೆ ಇವರು ಬಿಂಬಿಸಿದರು ಎಂದು ಆರೋಪಿಸಿದರು.

ಜನಸಂಕಷ್ಟದ ಯಾತ್ರೆ: ಬಿಜೆಪಿಯದು ಜನಸಂಕಲ್ಪ ಯಾತ್ರೆಯಲ್ಲ. ಅದು ಜನಸಂಕಷ್ಟದ ಯಾತ್ರೆ. ಬಜೆಟ್​ನಲ್ಲಿ ನೀಡಿದ ಭರವಸೆಯನ್ನು ಈಡೇರಿಸದೇ ಚುನಾವಣೆಯಲ್ಲಿ ಜನರ‌ ಮನಸ್ಸನ್ನು ಬೇರೆಡೆ ತಿರುಗಿಸಲು ಮತ್ತು ಭ್ರಷ್ಟಾಚಾರ ಮರೆ ಮಾಚಲು ಈ ಯಾತ್ರೆ ಮಾಡಲಾಗುತ್ತಿದೆ. ಇವರಿಗೆ ರಸ್ತೆಯ ಗುಂಡಿಯನ್ನು ಮುಚ್ಚಲು ಸಾಧ್ಯವಾಗಿಲ್ಲ. ಇವರು ಯಾವ ಕೆಲಸ ಮಾಡಿದ್ದಾರೆ ಎಂದು ಜನಸಂಕಲ್ಪ ಯಾತ್ರೆಯಲ್ಲಿ ಹೇಳಲಿ ಎಂದು ಆಗ್ರಹಿಸಿದರು.

ಸೈಲೆನ್ಸರ್ ಸರ್ಕಾರ:ಡಬಲ್ ಇಂಜಿನ್ ಸರ್ಕಾರದಿಂದದ ಭಯಂಕರ ಅಭಿವೃದ್ಧಿ ಎಂದು ಹೇಳಿದ್ದರು. ಇಂಜಿನ್ ಕೆಟ್ಟು ಹೋಗಿದೆ. ಸೈಲೆನ್ಸರ್ ಮಾತ್ರ ಸದ್ದು ಮಾಡುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರವಲ್ಲ ಸೈಲೆನ್ಸರ್ ಸರ್ಕಾರ ಎಂದರು.

ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮದ ಬಗ್ಗೆ ನೀಡಿದ ಹೇಳಿಕೆ ಅವರ ವೈಯಕ್ತಿಕ. ಅವರು ಪಕ್ಷದ ವೇದಿಕೆಯಲ್ಲಿ ಈ ಮಾತನ್ನು ಹೇಳಿಲ್ಲ. ಈ ಬಗ್ಗೆ ಈಗಾಗಲೇ ಪಕ್ಷದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪಕ್ಷಕ್ಕೆ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಯಾರಿಗೂ ನೋವಾಗುವಂತಹ ಯಾವುದೇ ಹೇಳಿಕೆಯನ್ನು ಯಾರು ನೀಡಬಾರದು ಎಂದರು.

ಇದನ್ನೂ ಓದಿ:ಮೀನುಗಾರರಿಗೆ ದೊರಕದ ಸೀಮೆಎಣ್ಣೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಕೈಕಟ್ಟಿ ಕುಳಿತ‌ ಮೀನುಗಾರರು

ABOUT THE AUTHOR

...view details