ಕರ್ನಾಟಕ

karnataka

ETV Bharat / state

ಕಡಬ: ತೋಟಕ್ಕೆ ಕಾಡುಕೋಣಗಳ ದಾಂಗುಡಿ, ರೈತರಿಗೆ ಮಂಡೆಬಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸುತ್ತಮುತ್ತ ಕಳೆದೊಂದು ವಾರದಿಂದ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಕೃಷಿ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ.

kn_dk_01_
ತೋಟಗಳಿಗೆ ನುಗ್ಗಿದ ಕಾಡು ಕೋಣಗಳು

By

Published : Oct 20, 2022, 3:57 PM IST

ಕಡಬ:ತಾಲೂಕಿನ ಕೊಯಿಲ ಗ್ರಾಮದ ಸಬಳೂರು, ಅಯೋಧ್ಯಾ ನಗರ ಸುತ್ತಮುತ್ತಲಿನ ಕೃಷಿ ತೋಟಗಳಿಗೆ ಕಾಡುಕೋಣಗಳು ಲಗ್ಗೆಯಿಟ್ಟು ಬೆಳೆ ಹಾನಿ ಮಾಡುತ್ತಿವೆ.

ತೋಟಗಳಿಗೆ ನುಗ್ಗಿದ ಕಾಡು ಕೋಣಗಳು

ಕಳೆದೆರಡು ತಿಂಗಳ ಹಿಂದೆ ಇದೇ ಪರಿಸರದಲ್ಲಿ ಬೀಡುಬಿಟ್ಟಿದ್ದ ಕಾಡುಕೋಣಗಳು ರಾತ್ರಿ ವೇಳೆ ಕೃಷಿ ತೋಟಗಳಿಗೆ ಹೊಕ್ಕು ಹಾನಿ ಮಾಡಿದ್ದವು. ಇದೀಗ ಒಂದು ವಾರದಿಂದ ಮತ್ತೆ ಈ ಪರಿಸರದ ಪಟ್ಟೆದಮೂಲೆ, ಸಬಳೂರು ಭಾಗದ ಕೃಷಿ ತೋಟಗಳಿಗೆ ನುಗ್ಗಿ ಬೆಳೆ ಪುಡಿಗಟ್ಟುತ್ತಿವೆ. ಕೆಲವು ಬಾರಿ ರಸ್ತೆ ಸಂಚಾರಿಗಳಿಗೂ ಇವು ಕಾಣಸಿಗುತ್ತಿವೆ.

ತೋಟಗಳಲ್ಲಿ ತಡೆಬೇಲಿಗೆ ನೆಟ್ಟ ಗಿಡಗಳನ್ನು ಸಂಪೂರ್ಣ ತಿಂದು ಹಾಕಿದ್ದು, ಮೇವಿಗಾಗಿ ನಾಟಿ ಮಾಡಲಾದ ಹುಲ್ಲು, ತೋಟದಲ್ಲಿ ಬೆಳೆದ ಹುಲ್ಲನ್ನು ತಿನ್ನುತ್ತಿದ್ದು ಗೋವುಗಳಿಗೆ ಹುಲ್ಲು ಇಲ್ಲದಾಗುವ ಪರಿಸ್ಥಿತಿ ತಲೆದೋರುವ ಅತಂಕವನ್ನು ಕೃಷಿಕ ರಾಜೀವ ಪಟ್ಟೆದಮೂಲೆ ವ್ಯಕ್ತಪಡಿಸಿದರು. ಹಾಗಾಗಿ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳನ್ನು ಸರೆ ಹಿಡಿಯಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಜನರಲ್ಲಿ ಆತಂಕ!

ABOUT THE AUTHOR

...view details