ಕರ್ನಾಟಕ

karnataka

ನಾಡು ಶಾಂತಿ, ಸಮೃದ್ಧಿಯ ನೆಲೆಬೀಡಾಗಲಿ.. ಬಿಷಪ್ ಲಾರನ್ಸ್ ಮುಕ್ಕುಯಿ ಕ್ರಿಸ್ಮಸ್ ಸಂದೇಶ

By

Published : Dec 25, 2020, 9:43 AM IST

ಇಡೀ ಪ್ರಪಂಚವು ಕೊರೊನಾ ಬಾಧೆಯಿಂದ ತತ್ತರಿಸಿದೆ. ಈ ಮಾರಿಯಿಂದ ಚೇತರಿಸಿಕೊಳ್ಳಲು ಪ್ರಭುಕ್ರಿಸ್ತರ ಆರ್ಶೀವಾದಕ್ಕಾಗಿ ನಾವು ಪಾರ್ಥಿಸೋಣ. ಕೊರೊನಾ ಬಾಧೆಯ ಮೂಲಕ ದೇವರು ನಮಗೆ ನೀಡುತ್ತಿರುವ ತಾಳ್ಮೆಯ, ಸಹಬಾಳ್ವೆಯ ಮತ್ತು ಸಾಮರಸ್ಯದ ಸಂದೇಶ ಸ್ವೀಕರಿಸೋಣ..

ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಬಿಷಪ್ ಲಾರನ್ಸ್ ಮುಕ್ಕುಯಿ
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಬಿಷಪ್ ಲಾರನ್ಸ್ ಮುಕ್ಕುಯಿ

ಬೆಳ್ತಂಗಡಿ (ದಕ್ಷಿಣ ಕನ್ನಡ): ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಬಿಷಪ್ ಲಾರನ್ಸ್ ಮುಕ್ಕುಯಿ ಅವರು ಕ್ರಿಸ್​ಮಸ್ ಸಂದೇಶ ಸಾರಿದ್ದಾರೆ.

ನಾಡಿನ ಸಮಸ್ತ ಜನರಿಗೂ ಕ್ರಿಸ್ತ ಜಯಂತಿಯ ಶುಭಾಶಯಗಳನ್ನು ಕೋರುತ್ತೇನೆ. ಪಾಪಾಂಧಕಾರದಲ್ಲಿ ಮುಳುಗಿದ್ದ ಮಾನವ ಕುಲಕ್ಕೆ ರಕ್ಷಣೆಯನ್ನೀಯಲು ದೇವರ ಪುತ್ರರಾದ ಯೇಸು ಕ್ರಿಸ್ತರು ಜನಿಸಿದರು. ಇದು ಸರ್ವ ಮನುಷ್ಯರಿಗೂ ಸಂತೋಷವನ್ನು ಕೊಡುವ ಸುದ್ದಿಯಾಗಿದೆ.

ಈ ಸುದ್ದಿಯು ನಮಗೆ ಸಿಹಿಯಾಗಬೇಕಿದ್ದರೆ ಯೇಸುಕ್ರಿಸ್ತರನ್ನು ಸ್ವೀಕರಿಸಿ ಅವರು ತೋರಿಸಿಕೊಟ್ಟ ಪರಿಶುದ್ಧತೆಯ ಮತ್ತು ಪರಪ್ರೀತಿಯ ಮಾರ್ಗದಲ್ಲಿ ಸಂಚರಿಸಬೇಕು. ದ್ವೇಷ, ಕಲಹವನ್ನು ತ್ಯಜಿಸಿ, ಪ್ರೀತಿಯ ಮತ್ತು ಶಾಂತಿಯ ದಾರಿಯಲ್ಲಿ ಸಾಗಬೇಕು.

ಇಡೀ ಪ್ರಪಂಚವು ಕೊರೊನಾ ಬಾಧೆಯಿಂದ ತತ್ತರಿಸಿದೆ. ಈ ಮಾರಿಯಿಂದ ಚೇತರಿಸಿಕೊಳ್ಳಲು ಪ್ರಭುಕ್ರಿಸ್ತರ ಆರ್ಶೀವಾದಕ್ಕಾಗಿ ನಾವು ಪಾರ್ಥಿಸೋಣ. ಕೊರೊನಾ ಬಾಧೆಯ ಮೂಲಕ ದೇವರು ನಮಗೆ ನೀಡುತ್ತಿರುವ ತಾಳ್ಮೆಯ, ಸಹಬಾಳ್ವೆಯ ಮತ್ತು ಸಾಮರಸ್ಯದ ಸಂದೇಶ ಸ್ವೀಕರಿಸೋಣ.

ಕ್ರಿಸ್​ಮಸ್ ಆಚರಣೆಯ ಸಂದರ್ಭದಲ್ಲಿ ನಾಡಿನ ಸಮಸ್ತರಿಗೂ ಪ್ರಭುಕ್ರಿಸ್ತರ ಆರ್ಶೀವಾದವನ್ನು ಪ್ರಾರ್ಥಿಸುತ್ತೇನೆ ಎಂದರು. ನಮ್ಮ ನಾಡು ಶಾಂತಿಯ ಮತ್ತು ಸಮೃದ್ಧಿಯ ನೆಲೆಬೀಡಾಗಲಿ ಎಂದು ಹಾರೈಸುತ್ತೇನೆ. 2021ರ ಹೊಸ ವರ್ಷದ ಶುಭವನ್ನು ಸರ್ವರಿಗೂ ಕೋರುತ್ತೇನೆ ಎಂದಿದ್ದಾರೆ.

ABOUT THE AUTHOR

...view details