ಕರ್ನಾಟಕ

karnataka

ETV Bharat / state

ನಾರಾಯಣ ಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡದಿದ್ದರೆ ತೀವ್ರ ಹೋರಾಟ : ಬಿಲ್ಲವ ಸಂಘದಿಂದ ಎಚ್ಚರಿಕೆ - ನಾರಾಯಣ ಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡದಿದ್ದರೆ ತೀವ್ರ ಹೋರಾಟ ಬಿಲ್ಲವ ಸಂಘದಿಂದ ಎಚ್ಚರಿಕೆ

ಈ ಕುರಿತಂತೆ ಯಾವುದೇ ರಾಜಕೀಯ ಪಕ್ಷಗಳಿಂದ ಅಥವಾ ಸಚಿವ, ಸಂಸದರಿಂದ ಸಮಜಾಯಿಷಿ ಬೇಡ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಶ್ರೇಷ್ಠ ಸಂತರಲ್ಲಿ ಬ್ರಹ್ಮಶ್ರೀ ನಾರಾಯಣಗುರು ಒಬ್ಬರು ಎಂಬುದನ್ನು ಯಾರೂ ಮರೆಯಬಾರದು..

ಪುತ್ತೂರಿನಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಸುದ್ದಿಗೋಷ್ಠಿ
ಪುತ್ತೂರಿನಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಸುದ್ದಿಗೋಷ್ಠಿ

By

Published : Jan 18, 2022, 4:55 PM IST

ಪುತ್ತೂರು :ಸಾಮಾಜಿಕ ಪರಿವರ್ತನೆಯ ಹರಿಕಾರ, ಕೇರಳದಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಯ ಮೂಲಕ ಹಿಂದುಳಿದ ವರ್ಗಗಳಲ್ಲಿ ಸ್ವಾಭಿಮಾನ ಮತ್ತು ಶೈಕ್ಷಣಿಕ ಜಾಗೃತಿ ಮೂಡಿಸಿದ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇರಳ ರಾಜ್ಯ ಸಿದ್ದಪಡಿಸಿದೆ.

ಈ ಸ್ತಬ್ಧ ಚಿತ್ರಕ್ಕೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘವು ತಾಲೂಕಿನ 52 ಗ್ರಾಮ ಸಮಿತಿಗಳ ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಲಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.

ಕೇಂದ್ರ ಸರ್ಕಾರಕ್ಕೆ ಪುತ್ತೂರಿನಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಅವರು ಎಚ್ಚರಿಕೆ ನೀಡಿರುವುದು..

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಧರ್ಮದವರೂ ಮತ್ತು ಸರ್ವ ಸಮುದಾಯದವರೂ ನಾರಾಯಣ ಗುರುಗಳ ತತ್ವ, ಆದರ್ಶಗಳನ್ನು ಒಪ್ಪಿಕೊಳ್ಳುತ್ತಾರೆ. ಎಲ್ಲಾ ಸಮುದಾಯಗಳಲ್ಲಿಯೂ ನಾರಾಯಣ ಗುರುಗಳ ಅನುಯಾಯಿಗಳಿದ್ದಾರೆ.

ಈ ವಿಚಾರವನ್ನು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು. ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳು ಕೇವಲ ಕೇರಳಕ್ಕೆ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಇವುಗಳು ಪಸರಿಸಿವೆ ಎಂದರು.

ಸಮಜಾಯಿಷಿ ಬೇಡ :ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಬೇಕು. ಈ ಕುರಿತು ಯಾವುದೇ ಸಮಜಾಯಿಷಿ ಬೇಡ. ದ.ಕ. ಜಿಲ್ಲೆಯಲ್ಲಿ ನಾರಾಯಣ ಗುರುಗಳ ಅನುಯಾಯಿಗಳ ಮತ ಪಡೆದು ಎಲ್ಲರೂ ಶಾಸಕ, ಸಂಸದ, ಸಚಿವರಾಗಿದ್ದಾರೆ. ಇವರೆಲ್ಲರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧ ಚಿತ್ರ ಪಾಲ್ಗೊಳ್ಳುವಂತೆ ಮಾಡಬೇಕು.

ಈ ಕುರಿತಂತೆ ಯಾವುದೇ ರಾಜಕೀಯ ಪಕ್ಷಗಳಿಂದ ಅಥವಾ ಸಚಿವ, ಸಂಸದರಿಂದ ಸಮಜಾಯಿಷಿ ಬೇಡ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಶ್ರೇಷ್ಠ ಸಂತರಲ್ಲಿ ಬ್ರಹ್ಮಶ್ರೀ ನಾರಾಯಣಗುರು ಒಬ್ಬರು ಎಂಬುದನ್ನು ಯಾರೂ ಮರೆಯಬಾರದು ಎಂದರು.

For All Latest Updates

TAGGED:

ABOUT THE AUTHOR

...view details