ಕರ್ನಾಟಕ

karnataka

ETV Bharat / state

ತೈಲ ಬೆಲೆ ಏರಿಕೆ ವಿರೋಧಿಸಿ ಅಂದು ಪ್ರತಿಭಟಿಸಿದ್ದ ಬಿಜೆಪಿಯವರು ಈಗೆಲ್ಲಿದ್ದಾರೆ: ರಮಾನಾಥ ರೈ ಪ್ರಶ್ನೆ - Bantwal in Mangalore district

ತೈಲ ಬೆಲೆ ಏರಿಕೆ ವಿರೋಧಿಸಿ ಬಂಟ್ವಾಳದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಯಿತು. ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುತ್ತದೆ. ಆದರೆ ಆಡಳಿತದಲ್ಲಿರುವ ಸರ್ಕಾರ ಇಂದು ಜನರ ಹಕ್ಕು ಮೊಟಕುಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ರೈ ದೂರಿದರು.

Bike jatha in Bantwala opposing oil prize hike
ಬೆಲೆ ಏರಿಕೆ ವಿರೋಧಿಸಿ ಅಂದು ಪ್ರತಿಭಟಿಸಿದ್ದ ಬಿಜೆಪಿಯವರು ಈಗೆಲ್ಲಿದ್ದಾರೆ: ರಮಾನಾಥ ರೈ ಪ್ರಶ್ನೆ

By

Published : Jun 29, 2020, 6:39 PM IST

ಬಂಟ್ವಾಳ(ದಕ್ಷಿಣ ಕನ್ನಡ): ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಏರಿಕೆಯಾದರೂ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿಯವರು ಈಗ ತೈಲ ಬೆಲೆ ಗಗನಕ್ಕೇರಿದರೂ ಉಸಿರು ಇಲ್ಲದೆ ಎಲ್ಲಿಗೆ ಹೋಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಬಂಟ್ವಾಳದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಯಿತು. ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುತ್ತದೆ. ಆದರೆ ಆಡಳಿತದಲ್ಲಿರುವ ಸರ್ಕಾರ ಇಂದು ಜನರ ಹಕ್ಕು ಮೊಟಕುಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ರೈ ದೂರಿದರು.

ಕಾಂಗ್ರೆಸ್​​ನಿಂದ ಪ್ರತಿಭಟನೆ

ಜಾಥಾ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಜೀಪಿಗೆ ಹಗ್ಗ ಕಟ್ಟಿ ಏಳೆಯಲಾಯಿತು. ಬಳಿಕ ತಹಶೀಲ್ದಾರ್ ಮೂಲಕ ಬೆಲೆ ಇಳಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ನೀಡಲಾಯಿತು.

ABOUT THE AUTHOR

...view details