ಮಂಗಳೂರು:ಬೈಕ್ ಮತ್ತು ಆ್ಯಕ್ಟಿವಾ ಸ್ಕೂಟಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿಯಲ್ಲಿ ನಡೆದಿದೆ.
ಬೈಕ್ ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು - manglore two people died news
ಬೈಕ್ ಮತ್ತು ಆ್ಯಕ್ಟಿವಾ ಸ್ಕೂಟಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿಯಲ್ಲಿ ನಡೆದಿದೆ.
ಬೈಕ್ ಮತ್ತು ಆ್ಯಕ್ಟಿವಾ ಡಿಕ್ಕಿ
ಕಲ್ಲಡ್ಕ ನಿವಾಸಿ ಅಝ್ಮಾನ್ ಹಾಗೂ ಕೊಡಾಜೆ ನಿವಾಸಿ ವಿವೇಕಾನಂದ ಡಿಪ್ಲೊಮಾ ವಿದ್ಯಾರ್ಥಿ ಪರೀಕ್ಷಿತ್ ಮೃತಪಟ್ಟವರಾಗಿದ್ದು, ಕಲ್ಲಡ್ಕದಿಂದ ಕೊಡಾಜೆಗೆ ಬರುತ್ತಿದ್ದ ಬೈಕ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆ್ಯಕ್ಟಿವಾ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ಎರಡೂ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.