ಮೂಡುಬಿದಿರೆ:ಬೈಕ್ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ವಾಲ್ಪಾಡಿಯ ಕ್ವಯಕುಡೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ನಿಯಂತ್ರಣ ತಪ್ಪಿದ ಬೈಕ್: ಮೃತಪಟ್ಟ ಸವಾರ...! - Moodbidire accident news
ಬೈಕ್ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ವಾಲ್ಪಾಡಿಯ ಕ್ವಯಕುಡೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಬೈಕ್ ಸವಾರನ ಸಾವು
ಅಳಿಯೂರು ವಿಕಾಸ ನಗರದ ತಿಮ್ಮಪ್ಪ ಮಡಿವಾಳ( 55) ಮೃತಪಟ್ಟ ಸವಾರನಾಗಿದ್ದಾನೆ. ತಿಮ್ಮಪ್ಪ ಮಡಿವಾಳ ಶಿರ್ತಾಡಿ ಪೇಟೆಯಲ್ಲಿ ಹೋಟೆಲೊಂದನ್ನು ನಡೆಸುತ್ತಿದ್ದು, ಅವರು ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯಿಂದ ಶಿರ್ತಾಡಿಯ ಹೋಟೆಲ್ನತ್ತ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಮಗುಚಿ ಬಿದ್ದಿದೆ. ಪರಿಣಾಮ ಬೈಕ್ನಿಂದ ಬಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.