ಮಂಗಳೂರು: ಕೂಲಿ ಕೆಲಸಕ್ಕೆಂದು ನಗರಕ್ಕೆ ಬಂದಿದ್ದ ಬಿಹಾರ ಮೂಲದ ಮಹಿಳೆಯೋರ್ವಳು ತಮ್ಮ ಮೂವರು ಮಕ್ಕಳೊಂದಿಗೆ ಕಾಣೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಭದ್ರಾದೇವಿ (32) ಕಾಣೆಯಾಗಿರುವ ಮಹಿಳೆ.
ಮೂವರು ಮಕ್ಕಳೊಂದಿಗೆ ಬಿಹಾರ ಮೂಲದ ಮಹಿಳೆ ನಾಪತ್ತೆ: ಮಂಗಳೂರಲ್ಲಿ ದೂರು ದಾಖಲು - Bihar-based woman missing
ಬಿಹಾರ ಮೂಲದ 32 ವರ್ಷದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಕಾಣೆಯಾಗಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರದ ಬಗಲಪುರ ತಾಲೂಕು ನಿವಾಸಿಯಾಗಿರುವ ಮಹಿಳೆ ಕೂಲಿ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದು, ತಮ್ಮ ಪತಿ ನೀರಜ್ ಚೌಧರಿಯೊಂದಿಗೆ ಪಚ್ಚನಾಡಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಜುಲೈ 14 ರಂದು ಸುಭದ್ರಾದೇವಿ ತಮ್ಮ ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳುವುದಾಗಿ ಹೇಳಿ ಹೋಗಿದ್ದರು. ಆದರೆ, ಅವರು ಬೆಂಗಳೂರಿಗೂ ಹೋಗದೆ, ತಮ್ಮ ಸ್ವಂತ ಊರಿಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಅವರ ಪತಿ ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗ: ಬಹಿರ್ದೆಸೆಗೆ ಹೋದ ಬಾಲಕಿ ಮೇಲೆ ರೇಪ್, ಮರ್ಡರ್
ಸುಭದ್ರಾ ದೇವಿ 5 ಅಡಿ ಎತ್ತರವಿದ್ದು, ಗೋಧಿ ಬಣ್ಣ, ಕೆನ್ನೆಯಲ್ಲಿ ಕಪ್ಪು ಮಚ್ಚೆ, ಮೂಗುತಿ ಧರಿಸಿರುತ್ತಾರೆ. ಹಿಂದಿ ಹಾಗೂ ಬಿಹಾರಿ ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ದೂರವಾಣಿ ಸಂಖ್ಯೆ 0824-2220535 ಸಂಪರ್ಕಿಸುವಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.