ಮಂಗಳೂರು: ಸ್ವಯಂ ಕೊರೊನಾ ಸೋಂಕು ತಪಾಸಣೆಗೆ ಹಾಜರಾಗಿದ್ದ ಜಿಲ್ಲೆಯಜಪ್ಪಿನಮೊಗರು ಗ್ರಾಮದ ಜೆಪ್ಪುಪಟ್ನದ ಯುವಕನೊಬ್ಬನಲ್ಲಿ ಪಾಸಿಟಿವ್ ವರದಿ ಬಂದಿದ್ದು, ಇದೀಗ ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.
ಲಾಕ್ಡೌನ್ಗಿಂತ ಮುಂಚೆಯೇ ಈತ ದೆಹಲಿಯಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಬಂದು ಉಳಿದಿದ್ದ. ಈ ಮಧ್ಯೆ ಊರಿಗೆ ಬರಬೇಕೆಂದು ನಿರ್ಧರಿಸಿ ದೆಹಲಿಯಿಂದ ಕಾಲ್ನಡಿಗೆಯಲ್ಲಿಯೇ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಮಾರ್ಗ ಮಧ್ಯೆ ಸಿಕ್ಕ ಸಿಕ್ಕ ಕಾರು, ವ್ಯಾನ್, ಲಾರಿಗಳನ್ನು ಹತ್ತಿ ಮನೆಗೆ ತಲುಪಿದ್ದಾನೆ. ದಾರಿ ಮಧ್ಯೆ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು, ಅಧಿಕಾರಿಗಳ ಕಣ್ಣುತಪ್ಪಿಸಿ ತನ್ನ ಜಿಲ್ಲೆಗೆ ಬಂದಿದ್ದಾನೆ.