ಕರ್ನಾಟಕ

karnataka

ETV Bharat / state

ತಣ್ಣೀರುಬಾವಿ ಕಡಲ ತೀರದಲ್ಲಿ‌ 'ಬಿಗ್ ಬ್ಯಾಂಗ್' ವಿಭಿನ್ನ ಕಾರ್ಯಕ್ರಮ - Big Bang event on the beach with cold water

ಮಂಗಳೂರು ನಗರದ ಮಂಗಳಾ ಸ್ಟೇಡಿಯಂನಿಂದ ತಣ್ಣೀರುಬಾವಿ ಕಡಲ ತೀರಕ್ಕೆ ಸೈಕ್ಲಿಂಗ್ ನಡೆಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿದ್ದು, ಬಳಿಕ ಬೀಚ್ ರಿಜುವೇಷನ್ ಆರ್ಮಿ ತಂಡದಿಂದ ಬೀಚ್ ಕ್ಲೀನಿಂಗ್ ನಡೆಯಿತು.

Big Bang event at Tanneerbavi beach
ತಣ್ಣೀರುಬಾವಿ ಕಡಲ ತೀರದಲ್ಲಿ‌ ಬಿಗ್ ಬ್ಯಾಂಗ್ ಎಂಬ ವಿಭಿನ್ನ ಕಾರ್ಯಕ್ರಮ

By

Published : Dec 13, 2020, 10:22 PM IST

ಮಂಗಳೂರು: ಆರೋಗ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಬಿಗ್ ಬ್ಯಾಂಗ್ ಎಂಬ ವಿಭಿನ್ನ ಕಾರ್ಯಕ್ರಮವೊಂದು ನಗರದ ತಣ್ಣೀರು ಬಾವಿ ಕಡಲ ತೀರದಲ್ಲಿ ನಡೆಯಿತು.

ಮೊಹಮ್ಮದ್ ಫೌಝಾನ್ ಶೇಕ್ ಮತ್ತು ಜೀವನ್ ಸ್ಟಾವ್ಲಿನ್ ತೌರೋ ನೇತೃತ್ವದಲ್ಲಿ ಬೀಚ್ ರಿಜುವೇಷನ್ ಆರ್ಮಿ, ವಿ ಆರ್ ಸೈಕ್ಲಿಂಗ್, ಮಂಗಳೂರು ಸರ್ಫ್ ಕ್ಲಬ್, ವಿಡಿಆರ್ ಡಿ ಸರ್ಫ್ ಲೈಫ್ ಸೇವಿಂಗ್ ಝೂಸ್ ಫಿಟ್ ನೆಸ್ ಸೆಂಟರ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ತಣ್ಣೀರುಬಾವಿ ಕಡಲ ತೀರದಲ್ಲಿ‌ ಬಿಗ್ ಬ್ಯಾಂಗ್ ಎಂಬ ವಿಭಿನ್ನ ಕಾರ್ಯಕ್ರಮ

ಓದಿ:ಮಂಗಳೂರಿನಿಂದ ಮಾಲ್ಡೀವ್ಸ್​ಗೆ ಮೊದಲ ಬಾರಿಗೆ ತರಕಾರಿ, ಸಗಣಿ ಗೊಬ್ಬರ ರಫ್ತು

ನಗರದ ಮಂಗಳಾ ಸ್ಟೇಡಿಯಂನಿಂದ ತಣ್ಣೀರುಬಾವಿ ಕಡಲ ತೀರಕ್ಕೆ ಸೈಕ್ಲಿಂಗ್ ನಡೆಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿದ್ದು, ಬಳಿಕ ಬೀಚ್ ರಿಜುವೇಷನ್ ಆರ್ಮಿ ತಂಡದಿಂದ ಬೀಚ್ ಕ್ಲೀನಿಂಗ್ ನಡೆಯಿತು. ಮಂಗಳೂರು ಸರ್ಫ್ ಕ್ಲಬ್ ವತಿಯಿಂದ ಸರ್ಫಿಂಗ್ ಹಾಗೂ ವಿಡಿಆರ್ ಡಿ ಸರ್ಫ್ ಲೈಫ್ ತಂಡದಿಂದ ಸಮುದ್ರಕ್ಕೆ ಮುಳುಗುವವರ ರಕ್ಷಣಾ ಕಾರ್ಯಗಳ ಬಗ್ಗೆ ಪರಿಣತರಿಂದ ತರಬೇತಿ ನಡೆಯಿತು. ಜೊತೆಗೆ ಝೂಸ್ ಫಿಟ್ ನೆಸ್ ಸೆಂಟರ್​ನಿಂದ ನಡೆಸಿಕೊಟ್ಟ ಝೂಂಬಾ ನೃತ್ಯದಲ್ಲಿ ಭಾಗವಹಿಸಿದರು.

ತಣ್ಣೀರುಬಾವಿ ಕಡಲ ತೀರದಲ್ಲಿ‌ ಬಿಗ್ ಬ್ಯಾಂಗ್ ಕಾರ್ಯಕ್ರಮ

ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಬೀಚ್ ಪರಿಸರದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆದಿರೋದು ಈ ಕಾರ್ಯಕ್ರಮದ ವಿಶೇಷವಾಗಿತ್ತು.

For All Latest Updates

ABOUT THE AUTHOR

...view details