ದಕ್ಷಿಣ ಕನ್ನಡ: ಪುತ್ತೂರು ಪಿಎಲ್ಡಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ನೆಲ್ಯಾಡಿ ವಲಯದಿಂದ ಭಾಸ್ಕರ ಗೌಡ ಇಚ್ಲಂಪಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುತ್ತೂರು ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಭಾಸ್ಕರ ಗೌಡ ಇಚ್ಲಂಪಾಡಿ ಆಯ್ಕೆ - ದಕ್ಷಿಣಕನ್ನಡ ಸುದ್ದಿ
ಪುತ್ತೂರು ಪಿಎಲ್ಡಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ನೆಲ್ಯಾಡಿ ವಲಯದಿಂದ ಭಾಸ್ಕರ ಗೌಡ ಇಚ್ಲಂಪ್ಪಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುತ್ತೂರು ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಭಾಸ್ಕರ ಗೌಡ ಇಚ್ಲಂಪ್ಪಾಡಿ ಆಯ್ಕೆ
ಪುತ್ತೂರು ಪಿಎಲ್ಡಿ ಬ್ಯಾಂಕಿನ ನಿರ್ದೇಶಕರಾಗಿ 3ನೇ ಬಾರಿಗೆ ಆಯ್ಕೆಯಾಗಿರುವ ಇವರು, ಹಿಂದಿನ 5 ವರ್ಷಗಳಲ್ಲಿ ಬ್ಯಾಂಕಿನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ತಾ.ಪಂ.ಮಾಜಿ ಸದಸ್ಯರಾದ ಭಾಸ್ಕರ ಗೌಡ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಭಾರತೀಯ ಜನತಾ ಪಾರ್ಟಿಯ ಇಚ್ಲಂಪಾಡಿ ಗ್ರಾಮ ಮಟ್ಟದಿಂದ ಕಾರ್ಯಕರ್ತರಾಗಿ ದುಡಿದು ಜಿಲ್ಲಾ ಮಟ್ಟದ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.