ಮಂಗಳೂರು: ರಾಡಿಕ್ಲೈಸೇಷನ್ ಮತ್ತು ಪೋಲಾರೈಸೇಶನ್ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆ ನಲುಗುತ್ತಿದ್ದು, ಅಭಿವೃದ್ಧಿಗೆ ತೊಡಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಲಾಮಿಕ್ ರಾಡಿಕ್ಲೈಸೇಷನ್ ಮತ್ತು ಹಿಂದುತ್ವದ ಪೋಲಾರೈಸೇಶನ್ ನಿಂದ ದಕ್ಷಿಣ ಕನ್ನಡ ಅಭಿವೃದ್ಧಿ ಆಗುತ್ತಿಲ್ಲ. ಜಿಲ್ಲೆಯ ಜನರದು ಪ್ರಪಂಚಾದ್ಯಂತ ಕೊಡುಗೆಯಿದೆ. ಆದರೆ, ಇದರಿಂದ ಅಪನಂಬಿಕೆ ಹೆಚ್ಚಾಗಿದೆ. ಯಾರಿಗೂ ಲಾಭವಾಗಿಲ್ಲ. ಇದು ಯುವಜನರ ಬದುಕನ್ನು ನಾಶಮಾಡಿತು.
ಯುವಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರಲು ಇಷ್ಟಪಡದೇ ಹೊರ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ವೃದ್ಧಾಶ್ರಮ ತರಹ ಆಗಿ ಇದೀಗ ಕೇವಲ ಸೀನಿಯರ್ ಸಿಟಿಜನ್ ಉಳಿದುಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊರಗಿನಿಂದ ಬಂದು ಅಭಿವೃದ್ಧಿ ಮಾಡಲು ಬರುತ್ತಿಲ್ಲ. ಇಲ್ಲಿನವರು ಬೇರೆ ಕಡೆಗೆ ಹೋಗಿ ಸಾಧನೆ ಮಾಡಿದ್ದಾರೆ. ಆದರೆ, ಹೊರಗಿನಿಂದ ಬಂದು ಸಾಧನೆ ಮಾಡುವುದು ತುಂಬಾ ಕಡಿಮೆ. ಇದನ್ನು ನಿಲ್ಲಿಸಬೇಕಾಗಿದ್ದು ಆಮ್ ಆದ್ಮಿ ಸಿದ್ದಾಂತ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ವೃದ್ಧಾಶ್ರಮದ ತರಹ ಆಗಿದೆ: ಭಾಸ್ಕರ್ ರಾವ್ ಪಬ್ ದಾಳಿ- ಪೊಲೀಸ್ ಕಮಿಷನರ್ಗೆ ತರಾಟೆ: ಮಂಗಳೂರು ಪೊಲೀಸ್ ಕಮಿಷನರ್ ಪಬ್ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ ಎಂಬುದಕ್ಕೆ ಉತ್ತರಿಸಿದ ಅವರು ನೈತಿಕ ಪೊಲೀಸ್ ಗಿರಿ ರಾಜಕೀಯ ಬಲ ಇರುವಾಗ ಧೈರ್ಯ ಬರುತ್ತದೆ. ಇದರ ವಿರುದ್ಧ ಕ್ರಮ ತೆಗೆದುಕೊಂಡರೆ ಸಾಯಂಕಾಲವೇ ಗಂಟುಮೂಟೆ ಕೊಟ್ಟು ಕಳುಹಿಸುತ್ತಾರೆ. ದಾಳಿ ನಡದೇ ಇಲ್ಲ ಎಂಬ ಅವರ ಹೇಳಿಕೆಯಲ್ಲಿ ಅವರ ಅಸಹಾಯಕತೆಯನ್ನು ಬಲ್ಲೆ. ದಾಳಿಕೋರರಿಗೆ ರಕ್ಷಣೆ ಸಿಗುತ್ತಿರುವುದು ಖೇದಕರ. ಇದನ್ನು ನೇರವಾಗಿ ಹೇಳುವವರು ಉಳಿಯುವುದು ತುಂಬಾ ಕಷ್ಟ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಅವರಲ್ಲಿ ಯಾಕೆ ದಾಳಿಯನ್ನು ಸಮರ್ಥಿಸುತ್ತೀರಿ ಎಂದು ಪ್ರಶ್ನಿಸಲಾಗುವುದು ಎಂದರು.
ಇದನ್ನೂ ಓದಿ: 12ಕ್ಕೂ ಹೆಚ್ಚು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ತ್ರಿಪುರಾ ಕಾಂಗ್ರೆಸ್ ಮುಖ್ಯಸ್ಥರ ಹೇಳಿಕೆ