ಕರ್ನಾಟಕ

karnataka

ETV Bharat / state

ಹಸಿರಿನಿಂದ ನಳನಳಿಸುತ್ತಿರುವ ಹಡಿಲು ಕೃಷಿಭೂಮಿ - Paddy panting

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಸುಮಾರು 5 ಎಕರೆ ವಿಸ್ತೀರ್ಣವುಳ್ಳ ಹಡಿಲು ಜಮೀನಿನಲ್ಲಿ ನಾಟಿಯಂತ್ರದ ಮೂಲಕ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Paddy
Paddy

By

Published : Jul 30, 2020, 12:02 PM IST

ಬಂಟ್ವಾಳ: 4 ವರ್ಷಗಳಿಂದ ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಬೇಸಾಯ ಮಾಡದೇ ಇದ್ದ ಹಡಿಲು ಕೃಷಿಭೂಮಿ ಈಗ ಹಸಿರಿನಿಂದ ನಳನಳಿಸುತ್ತಿದೆ.

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೊಯಿಲಗುತ್ತು ರಾಘವೇಂದ್ರರಾವ್ ಅವರ ಸುಮಾರು 5 ಎಕರೆ ವಿಸ್ತೀರ್ಣವುಳ್ಳ ಹಡಿಲು ಜಮೀನಿನಲ್ಲಿ ನಾಟಿಯಂತ್ರದ ಮೂಲಕ ಭತ್ತದ ನಾಟಿ ಮಾಡಲಾಯಿತು.

ಈ ವರ್ಷ ಕೃಷಿ ಇಲಾಖೆ ಸಹಾಯಧನದಲ್ಲಿ ಅಧಿಕ ಇಳುವರಿಯ ಬಿತ್ತನೆ ಬೀಜ, ಕೃಷಿ ಸುಣ್ಣ ಹಾಗೂ ಸಾವಯವ ಗೊಬ್ಬರವನ್ನು ವಿತರಿಸಲಾಗಿದೆ. ಬೆಳ್ತಂಗಡಿಯ ನಡ ಗ್ರಾಮದ ಪ್ರಗತಿಪರ ರೈತ ಪ್ರಭಾಕರ ಮಯ್ಯ ಈ ಸಂದರ್ಭದಲ್ಲಿ ಆಗಮಿಸಿ ಅನುಭವಗಳನ್ನು ಹಂಚಿಕೊಂಡರು.

ಈ ವೇಳೆ, ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಕೆ. ನಾರಾಯಣ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ, ಸ್ಥಳೀಯ ರೈತರಾದ ಹರ್ಷೇಂದ್ರ ಹೆಗ್ಡೆ ಮತ್ತಿತರರು ಪೂರಕ ಮಾಹಿತಿಗಳನ್ನು ಪಡೆದುಕೊಂಡರು.

ABOUT THE AUTHOR

...view details