ಕರ್ನಾಟಕ

karnataka

ETV Bharat / state

ಎಬಿವಿಪಿ ವತಿಯಿಂದ ನಿವೃತ್ತ ಯೋಧರಿಗೆ ಸನ್ಮಾನ - ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಬಂಟ್ವಾಳ ಮತ್ತು ಸಿದ್ಧಕಟ್ಟೆಯ ಎಬಿವಿಪಿ ವತಿಯಿಂದ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.

Abvp
Abvp

By

Published : Jul 27, 2020, 3:13 PM IST

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಮತ್ತು ಸಿದ್ದಕಟ್ಟೆ ಘಟಕಗಳಿಂದ ಕಾರ್ಗಿಲ್ ವಿಜಯ ದಿವಸ್ ನಿಮಿತ್ತ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.

ಸಿ ಆರ್ ಪಿ ಎಫ್ ನಲ್ಲಿ ಸೇವೆ ಸಲ್ಲಿಸಿರುವ ಉರುಡಂಗೆ ನಿವಾಸಿ ರಾಜೇಶ್ ಶೆಟ್ಟಿಗಾರ್ ಅವರಿಗೆ ಸನ್ಮಾನ ಮಾಡಲಾಯಿತು. ಇವರು ಚೆನ್ನೈ, ಪ್ರಧಾನಮಂತ್ರಿ ವಿಶೇಷ ಕಾರ್ಯ ಸಮೂಹ, ಜಮ್ಮು ಕಾಶ್ಮೀರ, ಬಿಹಾರದ ಗಯಾ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಶ್​ ಶೆಟ್ಟಿಗಾರ್​ ಅವರು, ವಿದ್ಯಾರ್ಥಿ ಪರಿಷತ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಭಾರತ ಮಾತೆಯ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಈ ವೇಳೆ ಎಬಿವಿಪಿ ತಾಲೂಕು ಸಂಚಾಲಕರಾದ ಹರ್ಷಿತ್ ಕೊಯ್ಲ, ತಾಲೂಕು ಸಹ ಸಂಚಾಲಕರಾದ ದಿನೇಶ್ ಕೊಯ್ಲ, ನಗರ ಸಹಕಾರ್ಯದರ್ಶಿ ನಾಗರಾಜ್, ಘಟಕದ ಅಧ್ಯಕ್ಷ ಗುರುಪ್ರಸಾದ್ ಹಾಗೂ ಕಾರ್ಯಕರ್ತರಾದ ರಾಜೇಶ್, ದೀಪಕ್, ಪ್ರಜ್ವಲ್, ಕಿರಣ್, ಪ್ರದೀಪ್, ಶಿವಕುಮಾರ್ ಉಪಸ್ಥಿತರಿದ್ದರು.

ABOUT THE AUTHOR

...view details