ಮಂಗಳೂರು: ಅನ್ಯಕೋಮಿನ ಯುವಕ ಲವ್ ಜಿಹಾದ್ ಮಾಡುತ್ತಿದ್ದಾನೆಂದು ಆರೋಪಿಸಿ ಮಂಗಳೂರಿನ ಜ್ಯುವೆಲ್ಲರಿ ಶಾಪ್‌ನೊಳಗೆ ನುಗ್ಗಿದ ಭಜರಂಗದಳದ ಕಾರ್ಯಕರ್ತರು ಯುವಕನಿಗೆ ಥಳಿಸಿದ್ದಾರೆ. ನಗರದ ಕಂಕನಾಡಿ ಬಳಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಯುವಕ ಕೆಲಸ ಮಾಡುತ್ತಿದ್ದರು. ಇವರು ಬೈಕ್ನಲ್ಲಿ ಓಡಾಡುವುದನ್ನು ಗಮನಿಸಿದ ಸಂಘಟನೆಯ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
ಯುವತಿ ಜೊತೆ ಬೈಕ್ನಲ್ಲಿ ಓಡಾಟ: ಅನ್ಯಕೋಮಿನ ಯುವಕನಿಗೆ ಥಳಿತ - Etv Bharat Karnataka
ಅನ್ಯಕೋಮಿನ ಯುವಕನೊಂದಿಗೆ ಯುವತಿ ತಿರುಗುತ್ತಿರುವುದನ್ನು ಕಂಡು ಭಜರಂಗದಳದ ಕಾರ್ಯಕರ್ತರು ಯುವಕನನ್ನು ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅನ್ಯಕೋಮಿನ ಯುವಕನಿಗೆ ಭಜರಂಗದಳ ಕಾರ್ಯಕರ್ತರಿಂದ ಥಳಿತ
ಅಲ್ಲದೇ ಈ ವಿಷಯವನ್ನು ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಭಜರಂಗದಳ ಕಾರ್ಯಕರ್ತರು ಮತ್ತು ಪೊಲೀಸರ ಜೊತೆಗೆ ಯುವತಿ ಪೋಷಕರು ಜ್ಯುವೆಲ್ಲರಿ ಶಾಪ್ಗೆ ಬಂದಿದ್ದು, ಈ ವೇಳೆ ಪೊಲೀಸರೆದುರೇ ಯುವಕನ ಮೇಲೆ ಹಲ್ಲೆ ನಡೆದಿದೆ. ಯುವತಿಗೆ ಪೋಷಕರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಂಗಳೂರಿನಲ್ಲಿ ನೈತಿಕ ಪೊಲೀಸ್ಗಿರಿ: ಸಂಘಟನೆ ಕಾರ್ಯಕರ್ತರಿಂದ ಯುವಕನ ಮೇಲೆ ಹಲ್ಲೆ ಆರೋಪ
Last Updated : Dec 6, 2022, 10:31 PM IST