ಮಂಗಳೂರು:ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಾರಣಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ.
ಕುಮಾರ ಪರ್ವತ ಚಾರಣಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕ ನಾಪತ್ತೆ - ಚಾರಣಕ್ಕೆ ಬಂದ ಯುವಕ ನಾಪತ್ತೆ
ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ.

ಯುವಕ ನಾಪತ್ತೆ
ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಸಂತೋಷ್ (25) ನಾಪತ್ತೆಯಾದ ಯುವಕ. ಸೆ.14ರಂದು ಸುಬ್ರಹ್ಮಣ್ಯಕ್ಕೆ ಚಾರಣಕ್ಕೆ ಬಂದಿದ್ದ ಬೆಂಗಳೂರು ಮೂಲದ 12 ಮಂದಿ ಯುವಕರ ತಂಡವು ಕುಮಾರ ಪರ್ವತ ಚಾರಣ ಮಾಡಿ ಬಳಿಕ ಶೇಷಪರ್ವತಕ್ಕೆ ತೆರಳಿತ್ತು. ಆದರೆ ಚಾರಣದಿಂದ ವಾಪಸ್ಸಾಗುತ್ತಿದ್ದ ವೇಳೆ ಸಂತೋಷ್ ನಾಪತ್ತೆಯಾಗಿದ್ದಾನೆ.
ಈ ಸಂದರ್ಭ ಜೊತೆಗಾರರು ಎಷ್ಟೇ ಹುಡುಕಾಟ ನಡೆಸಿದರೂ ಸಂತೋಷ್ ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಳಿಕಾ ನಗರ ನಿವಾಸಿ ದರ್ಶನ್ ಎಂಬುವರು ಸಂತೋಷ್ ನಾಪತ್ತೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.