ಪುತ್ತೂರು (ದಕ್ಷಿಣ ಕನ್ನಡ):ಎರಡು ತಿಂಗಳಿನಿಂದ ಪಿಂಚಣಿ ಹಣ ಬಾರದಿರುವ ಬಗ್ಗೆ ಈಟಿವಿ ಭಾರತದಲ್ಲಿ ಬಂದ ಸುದ್ದಿಗೆ ಸ್ಪಂದಿಸಿದ ಅಂಚೆ ಇಲಾಖೆ ಫಲಾನುಭವಿಗಳಿಗೆ ಪಿಂಚಣಿ ಹಣ ಮುಟ್ಟಿಸುವ ಕಾರ್ಯ ಮಾಡಿದೆ.
ಇದನ್ನೂ ಓದಿ: 2 ತಿಂಗಳಿಂದ ಬಂದಿಲ್ಲ ಪಿಂಚಣಿ ಹಣ: ಸಂಕಷ್ಟದಲ್ಲಿ ಫಲಾನುಭವಿಗಳು

ಏ. 23 ರಂದು ಈಟಿವಿ ಭಾರತದಲ್ಲಿ '2 ತಿಂಗಳಿಂದ ಬಂದಿಲ್ಲ ಪಿಂಚಣಿ ಹಣ; ಸಂಕಷ್ಟದಲ್ಲಿ ಫಲಾನುಭವಿಗಳು'ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಈ ವರದಿ ಗಮನಿಸಿದ ಅಂಚೆ ಇಲಾಖೆ ನಾಲ್ಕು ತಿಂಗಳಿಂದ ಪಿಂಚಣಿ ಸಿಗದಿರುವ ಬಗ್ಗೆ ಸಂಕಷ್ಟ ತೋಡಿಕೊಂಡ ಅಜ್ಜಿ ಬಾಳಕ್ಕ ಅವರಿಗೆ ಪಿಂಚಣಿ ಹಣವನ್ನು ತಲುಪಿಸಿದೆ.
ಈ ಸುದ್ದಿ ಗಮನಿಸಿದ ಮಂಗಳೂರು ವಲಯ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಪುತ್ತೂರು ವಲಯದ ಅಂಚೆ ವಿಭಾಗಕ್ಕೆ ಮಾಹಿತಿ ನೀಡಿ ಅಜ್ಜಿಯ ಖಾತೆಗೆ ಪಿಂಚಣಿ ಹಣ ಬರುವಂತೆ ಮಾಡಿದ್ದಾರೆ.
ಪುತ್ತೂರು ತಾಲೂಕಿನ ಪಡೀಲ್‌ನಲ್ಲಿರುವ ಅಜ್ಜಿ ಮನೆಗೆ ಹೋಗಿ ಅಂಚೆಯಣ್ಣನೇ ನೇರವಾಗಿ ಈ ಹಣ ತಲುಪಿಸಿದ್ದಾರೆ. ಕೈಯಲ್ಲಿ ದುಡ್ಡಿಲ್ಲದೆ ಹಸಿವಿನಿಂದ ಇದ್ದ ಅಜ್ಜಿಗೆ ಇದೀಗ ಹಣ ತಲುಪಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.