ಕರ್ನಾಟಕ

karnataka

ETV Bharat / state

ಬೆಳ್ತಂಗಡಿಯ ಸುಮಾರು 45 ವರ್ಷದ ಹಳೆಯ ಕುಕ್ಕುಜೆ ಸೇತುವೆ ಕುಸಿತ - Belthangadi

ಸುಮಾರು 45 ವರ್ಷಕ್ಕೂ ಹಳೆಯದಾದ ಕುಕ್ಕುಜೆ ಸೇತುವೆಯು ಸಂಪೂರ್ಣ ಶಿಥಿಲಗೊಂಡು ಕುಸಿದು ಬಿದ್ದಿದೆ.

Belthangady Kukkuze Bridge  collapse
ಬೆಳ್ತಂಗಡಿ ಕುಕ್ಕುಜೆ ಸೇತುವೆ ಕುಸಿತ

By

Published : May 27, 2020, 11:13 PM IST

ಬೆಳ್ತಂಗಡಿ: ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್‌ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿರುವ ಕುಕ್ಕುಜೆ ಸೇತುವೆಯು ಸಂಪೂರ್ಣ ಶಿಥಿಲಗೊಂಡು, ಕುಸಿದು ಬಿದ್ದಿದೆ.


ಸುಮಾರು 45 ವರ್ಷಕ್ಕೂ ಹಳೆಯದಾದ ಈ ಸೇತುವೆಯ ಪಿಲ್ಲರ್ ಕುಸಿದು ಬಿದ್ದು, ಒಂದು ವರ್ಷವೇ ಕಳೆದು ಹೋಗಿತ್ತು. ಇದರ ದುರಸ್ತಿಗೆ ಈ ಭಾಗದ ನಾಗರಿಕರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಸೇತುವೆ ಶಿಥಿಲಗೊಂಡಿದ್ದರಿಂದ ಈ ಭಾಗದ 100 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ನದಿಯ ಮೇಲೆ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಟ್ಟಿದೆ.


ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು, ಈ ಭಾಗದ ಜನರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈ ಭಾಗದ ಜನರಿಗೆ ಆತಂಕ ಎದುರಾಗಿದೆ.

ABOUT THE AUTHOR

...view details