ಕರ್ನಾಟಕ

karnataka

ETV Bharat / state

ಬಂಟ್ವಾಳ: ಕೋತಿಗೆ ಬೆಲ್ಟ್ ತೊಡಿಸಿದ ಕಿಡಿಗೇಡಿಗಳು - ಶ್ರೀ ಕಾರಿಂಜೇಶ್ವರ ದೇವಸ್ಥಾನ

ಬಂಟ್ವಾಳ ತಾಲೂಕಿನ ಪ್ರಸಿದ್ಧ ಕ್ಷೇತ್ರ ಕಾರಿಂಜ ಕೋತಿಗಳಿಗೆ ಪ್ರಸಿದ್ಧ. ಇಲ್ಲಿ ಶಿಸ್ತುಬದ್ಧವಾಗಿರುವ ಕೋತಿಗಳಿಗೆ ಕಿಡಿಗೇಡಿಗಳು ಬೆಲ್ಟ್ ತೊಡಿಸಿ ಹಿಂಸೆ ನೀಡಿದ್ದಾಗಿ ದೂರಲಾಗಿದೆ.

monkey
monkey

By

Published : Jul 1, 2020, 12:18 PM IST

ಬಂಟ್ವಾಳ(ದ.ಕ): ದುಷ್ಕರ್ಮಿಗಳು ಕೋತಿಯ ಸೊಂಟಕ್ಕೆ ಬೆಲ್ಟ್ ತೊಡಿಸಿದ ಅಮಾನವೀಯ ಘಟನೆ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದಿದೆ.

ಕಾರಿಂಜ ಕ್ಷೇತ್ರ ಕೋತಿಗಳಿಗೆ ಪ್ರಸಿದ್ಧ. ಇಲ್ಲಿನ ಕಾರಿಂಜೇಶ್ವರ ದೇವಸ್ಥಾನದಲ್ಲಿರುವ ಸುಮಾರು 50ಕ್ಕೂ ಅಧಿಕ ಕೋತಿಗಳು ಅಲ್ಲಿಗೆ ಬರುವ ಭಕ್ತರಿಂದ ಆಹಾರ ಹಾಗೂ ದೇವಸ್ಥಾನದ ನೈವೇದ್ಯ ಭೋಜನದ ಪ್ರಸಾದವನ್ನು ಸೇವಿಸುತ್ತವೆ.

ಕೋತಿಗೆ ಬೆಲ್ಟ್ ತೊಡಿಸಿದ ದುಷ್ಕರ್ಮಿಗಳು

ಸಾಮಾನ್ಯವಾಗಿ ಅಲ್ಲಿಗೆ ವಿಹಾರಕ್ಕೆಂದು ಬರುವವರು ಕೋತಿಗಳಿಗೆ ಕೀಟಲೆ ಮಾಡುವುದುಂಟು. ಆದರೆ ಇದೀಗ ಕೋತಿಗಳಿಗೆ ಕಿಡಿಗೇಡಿಗಳು ಬೆಲ್ಟ್ ತೊಡಿಸಿ ಹಿಂಸೆ ಅತಿರೇಕಕ್ಕೆ ಹೋಗಿರುವುದು ಬೆಳಕಿಗೆ ಬಂದಿದೆ.

ಕೋತಿಗೆ ಬೆಲ್ಟ್ ತೊಡಿಸಿದ ದುಷ್ಕರ್ಮಿಗಳು

ದೇವಸ್ಥಾನದ ಕೆಳಭಾಗದಲ್ಲಿರುವ ಗದಾ ತೀರ್ಥ ಕೆರೆಯ ರಥ ಬೀದಿಯಲ್ಲಿ ಈ ಕೋತಿ ಕಂಡು ಬಂದಿದ್ದು, ಸುಮಾರು ಏಳೆಂಟು ದಿನಗಳ ಹಿಂದೆ ಬೆಲ್ಟ್ ತೊಡಿಸಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಮೇನೇಜರ್ ಸತೀಶ್ ಪ್ರಭು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details