ಕರ್ನಾಟಕ

karnataka

ETV Bharat / state

ಸೂಟ್​​​​​ಕೇಸ್ ನಲ್ಲಿ ಗೋಮಾಂಸ ಸಾಗಣೆ: ಆರೋಪಿ ಬಂಧನ - ಮಂಗಳೂರಿನಲ್ಲಿ ಗೋಮಾಂಸ ಸಾಗಾಟ,

ಸೂಟ್​ಕೇಸ್​ನಲ್ಲಿ ಗೋಮಾಂಸ ಸಾಗಣೆ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

Beef meat supplier, Beef meat supplier arrested, Beef meat supplier arrested in Sullia, ಗೋಮಾಂಸ ಸಾಗಾಟ, ಮಂಗಳೂರಿನಲ್ಲಿ ಗೋಮಾಂಸ ಸಾಗಾಟ, ಮಂಗಳೂರಿನಲ್ಲಿ ಗೋಮಾಂಸ ಸಾಗಾಟಗಾರ ಬಂಧನ,
ಸಂಗ್ರಹ ಚಿತ್ರ

By

Published : Jul 23, 2020, 6:37 AM IST

ಸುಳ್ಯ (ದಕ್ಷಿಣಕನ್ನಡ):ಸೂಟ್​ಕೇಸ್​ನಲ್ಲಿ ಸುಮಾರು 15 ಕೆ.ಜಿ. ಗೋಮಾಂಸ ತುಂಬಿಸಿ ಸಾಗಣೆ ನಡೆಸುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಕಲ್ಲುಮುಟ್ಲು ನಿವಾಸಿ ನಿಸಾರ್(30) ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ ಸ್ಕೂಟರ್, 15 ಕೆ.ಜಿ. ಗೋಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈತ ಸುಳ್ಯದ ಗಾಂಧಿ ನಗರದಿಂದ ಸ್ಕೂಟರ್​ನಲ್ಲಿ ಸೂಟ್​ಕೇಸ್ ಒಂದನ್ನು ಹಿಡಿದುಕೊಂಡು ಹೋಗುತ್ತಿದ್ದನು. ಈತನ ಮೇಲೆ ಅನುಮಾನಗೊಂಡ ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಗಾಂಧಿನಗರದಿಂದ ಪೈಚಾರು ಕಡೆಗೆ ಗ್ರಾಹಕರಿಗೆ ನೀಡಲು ಗೋಮಾಂಸ ಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ABOUT THE AUTHOR

...view details