ಕರ್ನಾಟಕ

karnataka

ETV Bharat / state

ಬ್ಯಾರಿ ಲಿಪಿ ಕಲಿಕೆಯ ಆಸಕ್ತಿ ಬೆಳೆಸಿಕೊಳ್ಳಬೇಕು: ಪ್ರದೀಪ್ ಕುಮಾರ್ ಕಲ್ಕೂರ

ನೂತನವಾಗಿ ರಚಿಸಲಾದ ಬ್ಯಾರಿ ಲಿಪಿ ಕಲಿಕೆಯ ಆಸಕ್ತಿಯನ್ನು ಜನರು ರೂಪಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಹೇಳಿದರು.

By

Published : Sep 30, 2020, 11:39 PM IST

Mangalore
ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿ.ವಿ.ಡಿ. ಬಿಡುಗಡೆ ಕಾರ್ಯಕ್ರಮ

ಮಂಗಳೂರು: ನೂತನವಾಗಿ ರಚಿಸಲಾದ ಬ್ಯಾರಿ ಲಿಪಿ ಕಲಿಕೆಯ ಆಸಕ್ತಿಯನ್ನು ಜನರು ರೂಪಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಹೇಳಿದರು.

ಮಂಗಳೂರು ತಾಲೂಕು ಪಂಚಾಯತ್​ನ ಹೊಸ ಕಟ್ಟಡದ ಮೂರನೇ ಮಹಡಿಯ ಸಭಾಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿ.ವಿ.ಡಿ. ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ನಮ್ಮ ದೇಶ ವೈವಿಧತೆಯನ್ನು ಹೊಂದಿದೆ. ಭಾಷಾ ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಬ್ಯಾರಿ ಭಾಷೆಗಳನ್ನು ಮಾತನಾಡುವವರಿದ್ದು, ಬ್ಯಾರಿ ಭಾಷೆ, ಜನಾಂಗ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಬದುಕಿನ ಜೊತೆಗೆ ಧರ್ಮಾಚರಣೆಯನ್ನು ತೊಡಗಿಸಿಕೊಂಡಾಗ ಜೀವನ ಸುಂದರವಾಗುತ್ತದೆ. ಬ್ಯಾರಿ ಭಾಷೆಗೆ ಹೊಸದಾಗಿ ಕಂಡುಹಿಡಿಯಲಾದ ಲಿಪಿಯನ್ನು ಕಲಿಯುವ ಆಸಕ್ತಿಯನ್ನು ಜನರು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಇವರು ಬ್ಯಾರಿ ಲಿಪಿ ಸಾಮಾಜಿಕ ಜಾಲತಾಣದಲ್ಲಿ ಬಳಸಲು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾರಿ ಲಿಪಿ ಗ್ರಾಫಿಕ್ ಡಿಸೈನರ್ ಸಚಿನ್ ,ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮ, ಬ್ಯಾರಿ ಲಿಪಿ ರಚನೆ, ಪರಿಶೀಲನೆ, ಸಂಶೋಧನಾ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ಧರು.

For All Latest Updates

ABOUT THE AUTHOR

...view details