ಪುತ್ತೂರು:ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಆವರಣಕ್ಕೆ ಬಪ್ಪಳಿಗೆಯ ಗ್ಲೋಬಲ್ ಫ್ರೆಂಡ್ಸ್ ತಂಡ ನೀಡಿದ 3 ಬ್ಯಾರಿಕೇಡ್‌ಗಳನ್ನು ಸಂಚಾರಿ ಠಾಣೆಯ ಎಸ್ಐ ಚೆಲುವಯ್ಯ ಹಸ್ತಾಂತರಿಸಿದರು.
ಪುತ್ತೂರು ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಬ್ಯಾರಿಕೇಡ್ ವಿತರಣೆ.. - ಬ್ಯಾರಿಕೇಡ್ ವಿತರಣೆ ಕಾರ್ಯಕ್ರಮ
ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಆವರಣಕ್ಕೆ ಬಪ್ಪಳಿಗೆಯ ಗ್ಲೋಬಲ್ ಫ್ರೆಂಡ್ಸ್ ತಂಡ ನೀಡಿದ 3 ಬ್ಯಾರಿಕೇಡ್‌ಗಳನ್ನು ಸಂಚಾರಿ ಠಾಣೆಯ ಎಸ್ಐ ಚೆಲುವಯ್ಯ ಹಸ್ತಾಂತರಿಸಿದರು.
![ಪುತ್ತೂರು ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಬ್ಯಾರಿಕೇಡ್ ವಿತರಣೆ.. Barricade distribution in Puttur Government Hospital](https://etvbharatimages.akamaized.net/etvbharat/prod-images/768-512-5178795-thumbnail-3x2-net.jpg)
ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಸಂಘಟನೆಯ ಕಾರ್ಯದರ್ಶಿ ಮುದರ್ರೀಸ್ ನಯೀಮ್ ಫೈಜಿ ಮಾತನಾಡಿ, ನಮ್ಮ ತಂಡ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದೀಗ ಬ್ಯಾರಿಕೇಡ್ ನೀಡುವ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕೆಲವು ಸಂದರ್ಭ ವಾಹನದಟ್ಟಣೆಗಳಿಂದ ನಡೆದಾಡಲು ಕಷ್ಟವಾಗುತ್ತಿತ್ತು. ಇದೀಗ ಇಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ಬಪ್ಪಳಿಗೆಯ ಗ್ಲೋಬಲ್ ಫ್ರೆಂಡ್ಸ್ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ, ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ರಫೀಕ್, ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ಬಶೀರ್, ಉಪಾಧ್ಯಕ್ಷ ಇಬ್ರಾಹಿಂ, ಅಜೀಜ್ ಮತ್ತಿತರರು ಹಾಜರಿದ್ದರು.