ಕರ್ನಾಟಕ

karnataka

ETV Bharat / state

ಕರಾವಳಿಯ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್‌ಗೆ 'ಬರಗೂರು ಪ್ರಶಸ್ತಿ' ಪ್ರದಾನ - Baraguru award for sara abubakar

ಪ್ರಸಿದ್ಧ ಲೇಖಕಿ ಸಾರಾ ಅಬೂಬಕ್ಕರ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಸರೋಜಾ ದೇವಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.

Baraguru-award-for-sara-abubakar
ಸಾರಾ ಅಬೂಬಕ್ಕರ್ ಅವರಿಗೆ ಬರಗೂರು ಪ್ರಶಸ್ತಿ ಪ್ರದಾನ

By

Published : Mar 29, 2022, 5:05 PM IST

ಮಂಗಳೂರು:ಕರಾವಳಿಯ ಹಿರಿಯ, ಪ್ರಸಿದ್ಧ ಕನ್ನಡ ಲೇಖಕಿ ಸಾರಾ ಅಬೂಬಕ್ಕರ್ (85) ಅವರಿಗೆ ನಾಡೋಜ ಬರಗೂರು ಪ್ರತಿಷ್ಠಾನ ಕೊಡಮಾಡುವ 'ಬರಗೂರು ಪ್ರಶಸ್ತಿ'ಯನ್ನು ಇಂದು ಪ್ರದಾನ ಮಾಡಲಾಯಿತು. ಮಂಗಳೂರಿನ ಹ್ಯಾಟ್ ಹಿಲ್​ನಲ್ಲಿರುವ ಸಾರಾ ಅಬೂಬಕ್ಕರ್ ನಿವಾಸದಲ್ಲಿ ಬರಗೂರು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸುಂದರರಾಜ ಅರಸು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು.


ಈ ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಮತ್ತು ಚಿನ್ನದ ಪದಕ ಒಳಗೊಂಡಿದೆ. ಈ ಸಂದರ್ಭದಲ್ಲಿ ದಲಿತ ಮುಖಂಡ ಲೋಲಾಕ್ಷ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಲೇಖಕಿ ಜ್ಯೋತಿ ಚೇಳಾಯಿರು, ಲೇಖಕಿ ಷರೀಫ, ಮನಪಾ ಸದಸ್ಯೆ ಸಂಧ್ಯಾ ಆಚಾರ್, ಪತ್ರಕರ್ತ ಮಂಜುನಾಥ್ ಸಾಗರ್ ಉಪಸ್ಥಿತರಿದ್ದರು.

ಸಾರಾ ಅಬೂಬಕ್ಕರ್ ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-2), ತಳ ಒಡೆದ ದೋಣಿ, ಪಂಜರ, ಕಾಣಿಕೆ, ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ಸುಮಯ್ಯಾ (ಜನಪದ ಆಧರಿಸಿದ ಕಥೆಗಳು), ಕಮರಿದ ಕನಸು, ತೇಲಾಡುವ ಮೋಡಗಳು, ಹೀಗೂ ಒಂದು ಬದುಕು, ಮನೋಮಿ, ಐಷಾರಾಮದ ಆಳದಲ್ಲಿ ಪ್ರವಾಸಕಥನ.. ಇವು ಸಾರಾ ಅಬೂಬಕ್ಕರ್ ಅವರ ಇತರ ಪ್ರಮುಖ ಕೃತಿಗಳಾಗಿವೆ.

For All Latest Updates

ABOUT THE AUTHOR

...view details