ಬಂಟ್ವಾಳ:ಲಾಕ್ ಡೌನ್ನ ಎರಡನೇ ದಿನವಾದ ಇಂದು ಬಂಟ್ವಾಳ ಮತ್ತು ಬಿ.ಸಿ. ರೋಡ್ ಸೇರಿದಂತೆ ತಾಲೂಕಿನ ಹಲವೆಡೆ ಬೆಳಗಿನ ವೇಳೆ ವಾಹನ, ಜನಸಂಚಾರ ಕಂಡುಬಂತು.
ಬಂಟ್ವಾಳದಲ್ಲಿ ಎರಡನೇ ದಿನದ ಲಾಕ್ ಡೌನ್: ಬೆಳಗ್ಗೆ ಸಂಚಾರ, ಮಧ್ಯಾಹ್ನ ಬಂದ್! - Bantwala lockdown news
ಲಾಕ್ ಡೌನ್ ಹಿನ್ನೆಲೆ, ಬೆಳಗ್ಗೆ ಸಂಚಾರ ಎಂದಿನಂತೆಯೇ ಇತ್ತು. ಆದ್ರೆ ಮಧ್ಯಾಹ್ನ ವಾಹನ ಸಂಚಾರ ಕಡಿಮೆಯಾಯಿತು. ಸಂಜೆ ವೇಳೆ ಸಂಪೂರ್ಣ ಬಂದ್ ವಾತಾವರಣ ಕಂಡುಬಂತು.
Bantwala/Mangalore lockdown
ಅಗತ್ಯ ವಸ್ತುಗಳ ಖರೀದಿಗೆ ಬರುವವರು, ಕೆಲಸಗಳಿಗೆ ತೆರಳುವವರು, ದ್ವಿಚಕ್ರ ವಾಹನ, ಕಾರು, ವ್ಯಾನ್ಗಳಲ್ಲಿ ಓಡಾಡಿದರು. ಆದ್ರೆ ಸುಮಾರು 10:30ರ ವೇಳೆ ಚಟುವಟಿಕೆಗಳು ಕ್ಷೀಣವಾದವು.
ಕೆಲ ಹೊತ್ತಿನಲ್ಲಿ ವಾಹನಗಳ ಓಡಾಟ ಕಡಿಮೆಯಾಗಿ, ರಸ್ತೆಯಲ್ಲಿ ಪೊಲೀಸರಷ್ಟೇ ಕಂಡುಬಂದರು. ಕಳೆದ ಲಾಕ್ಡೌನ್ಗಿಂತ ಭಿನ್ನವಾಗಿ ಈ ಬಾರಿ ಜನರೇ ಸ್ವಯಂಪ್ರೇರಿತರಾಗಿ ಮಧ್ಯಾಹ್ನದ ಬಳಿಕ ರಸ್ತೆಗಿಳಿಯದೆ ಸರ್ಕಾರದ ಕ್ರಮಗಳನ್ನು ಅನುಸರಿಸಿದರು.