ಬಂಟ್ವಾಳ: ಮೆಸ್ಕಾಂ ಮೀಟರ್ ರೀಡರ್ ಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಗುತ್ತಿಗೆ ಬೇರೆಯವರಿಗೆ ಹೋಗಿದೆ. ಈ ಹಿಂದೆ ಒಬ್ಬರಿಗೆ ನೀಡುತ್ತಿದ್ದ ವೇತನವನ್ನು ಇದೀಗ ಇಬ್ಬಿಬ್ಬರು ಹಂಚಿಕೊಳ್ಳಿ ಎಂದು ಗುತ್ತಿಗೆದಾರರು ಹೇಳುತ್ತಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವಂತೆ ಮೆಸ್ಕಾಂ ಮೀಟರ್ ರೀಡರ್ ಗಳು ಒತ್ತಾಯಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ್ ಸೇವಾ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು, ಹಿಂದಿನ ಗುರಿಯನ್ನು ಗ್ರಾಮೀಣ ಭಾಗದಲ್ಲಿ 2500, ನಗರದಲ್ಲಿ 3500ಕ್ಕೆ ವಿಸ್ತರಿಸಿ, ಹೆಚ್ಚುವರಿ ರೀಡರ್ ಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಕನಿಷ್ಟ ವೇತನ ನೀಡದೇ ಇರುವ ಕುರಿತು ನಾವು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದೇವೆ, ಜೊತೆಗೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.