ಕರ್ನಾಟಕ

karnataka

ETV Bharat / state

ಕೆಲಸ ಅರಸಿ ಬಂದಿದ್ದ ಸ್ವಾಭಿಮಾನಿ ಕಾರ್ಮಿಕರಿಗೆ ನೆರವಾದ ಬಂಟ್ವಾಳ ಗ್ರಾಮ ಪಂಚಾಯಿತಿ - dakshina kannada news

ನಗರದಲ್ಲಿ ಕೆಲವು ದಿನಗಳಿಂದ ಉಳಿದಿದ್ದ ಈ 19 ಜನರ ತಂಡದಲ್ಲಿ 9 ಕುಟುಂಬದ ಸದಸ್ಯರಿದ್ದಾರೆ. ಯಾರಾದರೂ ಆಹಾರ ನೀಡಿದರೆ ಸ್ವಾಭಿಮಾನದಿಂದ ಬೇಡ ಎನ್ನುತ್ತಿದ್ದರಂತೆ. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಇಸ್ಮಾಯಿಲ್ ಕಣ್ಣಿಗೆ ಬಿದ್ದರು. ಕೂಡಲೇ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಎಂ, ಪಿಡಿಒ ಮಾಯಾಕುಮಾರಿ ಜೊತೆ ಚರ್ಚಿಸಿ, ಅವರನ್ನು ಗ್ರಾಪಂ ಸಭಾಭವನಕ್ಕೆ ಕರೆತರಲಾಯಿತು. ಬಳಿಕ ದಾನಿಗಳಿಂದ ಸಂಗ್ರಹಿಸಿದ ಆಹಾರ ಸಾಮಗ್ರಿಗಳನ್ನು ಒದಗಿಸಲಾಯಿತು.

Bantwal Town panchayath helps to workers those who came from gadag
ಕೆಲಸ ಅರಸಿ ಬಂದಿದ್ದ ಸ್ವಾಭಿಮಾನಿ ಕಾರ್ಮಿಕರಿಗೆ ನೆರವಾದ ಬಂಟ್ವಾಳ ಗ್ರಾಮಪಂಚಾಯಿತಿ

By

Published : Apr 17, 2020, 7:00 PM IST

ಬಂಟ್ವಾಳ/ದಕ್ಷಿಣ ಕನ್ನಡ: ಕೆಲಸ ಅರಸಿ ಗದಗದಿಂದ ಬಂಟ್ವಾಳಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಕುಟುಂಬ ಈಗ ಕೆಲಸವಿಲ್ಲದೇ ಪರಿತಪಿಸುತ್ತಿದೆ. ಲಾಕ್​ಡೌನ್​ನಿಂದಾಗಿ ಕೆಲಸ ಸಿಗದೇ ಟೆಂಟ್​ನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಯಾರಾದರೂ ಆಹಾರದ ಕಿಟ್​ ನೀಡಿದರೆ ಅದನ್ನು ತಿರಸ್ಕರಿಸಿ ನಮಗೆ ಕೆಲಸ ಕೊಡಿ ಎಂದು ಕೇಳುತ್ತಿದ್ದಾರೆ.

ಕೆಲಸ ಅರಸಿ ಬಂದಿದ್ದ ಸ್ವಾಭಿಮಾನಿ ಕಾರ್ಮಿಕರಿಗೆ ನೆರವಾದ ಬಂಟ್ವಾಳ ಗ್ರಾಮಪಂಚಾಯಿತಿ

ನಗರದಲ್ಲಿ ಕೆಲವು ದಿನಗಳಿಂದ ಉಳಿದಿದ್ದ ಈ 19 ಜನರ ತಂಡದಲ್ಲಿ 9 ಕುಟುಂಬದ ಸದಸ್ಯರಿದ್ದಾರೆ. ಯಾರಾದರೂ ಆಹಾರ ನೀಡಿದರೆ ಸ್ವಾಭಿಮಾನದಿಂದ ಬೇಡ ಎನ್ನುತ್ತಿದ್ದರಂತೆ. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಇಸ್ಮಾಯಿಲ್ ಕಣ್ಣಿಗೆ ಬಿದ್ದರು. ಕೂಡಲೇ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಎಂ. ಪಿಡಿಒ ಮಾಯಾಕುಮಾರಿ ಜೊತೆ ಚರ್ಚಿಸಿ, ಅವರನ್ನು ಗ್ರಾಪಂ ಸಭಾಭವನಕ್ಕೆ ಕರೆ ತರಲಾಯಿತು. ಇದೇ ವೇಳೆ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಇಒ ರಾಜಣ್ಣ ಸಹಿತ ಉನ್ನತ ಅಧಿಕಾರಿಗಳು ಆಗಮಿಸಿ, ಮಾರ್ಗದರ್ಶನ ನೀಡಿದರು. ದಾನಿಗಳಿಂದ ಸಂಗ್ರಹಿಸಿದ ಆಹಾರ ಸಾಮಗ್ರಿಗಳನ್ನು ಒದಗಿಸಲಾಯಿತು.

ಈಗ ಸರ್ಕಾರದ ವತಿಯಿಂದಲೇ ಉಚಿತ ಹಾಲು ಪೂರೈಕೆಯಾಗುತ್ತಿದೆ. ಗ್ರಾ.ಪಂ ಸದಸ್ಯರಾದ ದೇವಿದಾಸ್ ಶೆಟ್ಟಿ, ನಾರಾಯಣ ಪೂಜಾರಿ, ಎ. ಸಿ. ಮೊಯಿದ್ದೀನ್​​, ಉದ್ಯಮಿ ಮಾದವೆ ಮಾವೆ ಸಹಿತ ಹಲವರು ನೆರವಾದರು. ಗ್ರಾಮ ಪಂಚಾಯತ್ ಪಿಡಿಒ ಮಾಯಾ ಕುಮಾರಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್ ಎಂ. ಕಾರ್ಮಿಕರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

ABOUT THE AUTHOR

...view details