ಪುತ್ತೂರು:ಮಾನಸಿಕ ಕಿರುಕುಳಕ್ಕೆ ಬೇಸತ್ತು ಬಂಟ್ವಾಳ ಪುರಸಭೆ ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ನಡೆದಿದೆ.
ಪುರಸಭೆ ಆರೋಗ್ಯಾಧಿಕಾರಿ ಆತ್ಮಹತ್ಯೆ ಯತ್ನ ಆತ್ಮಹತ್ಯೆಗೆ ಯತ್ನಿಸುವ ಮೊದಲು ಪುರಸಭಾ ಅಧ್ಯಕ್ಷರನ್ನು ಉದ್ದೇಶಿಸಿ ಸೂಸೈಡ್ ನೋಟ್ ಬರೆದಿದ್ದು, 'ಅಧ್ಯಕ್ಷರೇ ನನ್ನನ್ನು ಕ್ಷಮಿಸಿ, ಮುಖ್ಯಾಧಿಕಾರಿ ದಿನನಿತ್ಯ ಅನಗತ್ಯವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಚೇರಿಯ ಸಿಬ್ಬಂದಿ ಇಕ್ಬಾಲ್ ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾನೆ' ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:700 ಟ್ರ್ಯಾಕ್ಟರ್ಗಳಲ್ಲಿ ದೆಹಲಿಯತ್ತ ಹೊರಟ ಪಂಜಾಬ್ ರೈತರು..
ಬಂಟ್ವಾಳ ಪುರಸಭೆಗೆ ಕಳೆದ 5 ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. 2 ತಿಂಗಳು ಯಾವುದೇ ಸಮಸ್ಯೆ ಇರಲಿಲ್ಲ. ತದನಂತರ ನಿರಂತರವಾಗಿ ಅನಗತ್ಯ ಬೈಗುಳ ಶುರುವಾಯಿತು.
ಆದರೆ ನಾನು ಯಾವುದೇ ಎದುರುತ್ತರ ನೀಡಿಲ್ಲ, ಯಾವುದೇ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ, ಆದರೂ ನಿರಂತರವಾಗಿ ನನ್ನ ಮೇಲೆ ಮುಖ್ಯಾಧಿಕಾರಿಯಿಂದ ಮಾನಸಿಕ ಕಿರುಕುಳ ಉಂಟಾಗುತ್ತಿದೆ ಎಂದು ಬಂಟ್ವಾಳ ಪುರಸಭೆಯ ಆರೋಗ್ಯಾಧಿಕಾರಿ ರವಿಕೃಷ್ಣ ಪುಣಚ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಸದ್ಯ ಅಸ್ಯಸ್ಥಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.