ಬಂಟ್ವಾಳ:ಕಡೇಶಿವಾಲಯ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಟೋದಲ್ಲಿ ತೆರಳುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸುದ್ದಿಯಾಗಿದ್ದಾರೆ.
ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಟೋದಲ್ಲಿ ತೆರಳಿ ಗಮನ ಸೆಳೆದ ಬಂಟ್ವಾಳ ಶಾಸಕ! - Bantwal MLA Rajesh nayak
ಭಾನುವಾರ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಟೋದಲ್ಲಿ ತೆರಳುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸುದ್ದಿಯಾಗಿದ್ದಾರೆ.
ಭಾನುವಾರ ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕರು ತೆರುಳುವ ಸಂದರ್ಭ ಶಾಸಕರ ಶಿಫಾರಸು ಮೇರೆಗೆ ಸ್ವಯಂ ಉದ್ಯೋಗದ ಯೋಜನೆಯಡಿಯಲ್ಲಿ ಆಟೋರಿಕ್ಷಾ ಸೌಲಭ್ಯ ಪಡೆದ ಮೋಹನ್ ನಾಯ್ಕ್ ಅವರು ಶಾಸಕರಿಗೆ ತನ್ನ ಅಟೋರಿಕ್ಷಾವನ್ನು ತೋರಿಸಿದರು. ಇದನ್ನು ನೋಡಿದ ಬಳಿಕ ಶಾಸಕರು ರಿಕ್ಷಾದಲ್ಲಿ ಕುಳಿತು ಮುಂದಿನ ಶಿಲಾನ್ಯಾಸ ಕಾಮಗಾರಿಗಳಿಗೆ ತೆರಳಿದ್ದು ಜನರ ಗಮನಸೆಳೆಯಿತು.
ಇದೇ ವೇಳೆ ರಾಜೇಶ್ ನಾಯ್ಕ್ 1 ಕೋಟಿ 70 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ಕೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ ಮತ್ತಿತರರು ಇದ್ದರು.