ಬಂಟ್ವಾಳ (ದ.ಕ.): ಬಿ.ಸಿ. ರೋಡ್ನ ಅಪೂರ್ವ ಜ್ಯುವೆಲರ್ಸ್ ಮಾಲೀಕ ಸುನೀಲ್ ಬಿ. ಅವರು ಕೊರೊನಾ ಲಾಕ್ಡೌನ್ ಸಂದರ್ಭ ತಮ್ಮ ಫೇಸ್ ಬುಕ್ ಮೂಲಕ ಜನರಿಗೆ ಹೊಸ ಟಾಸ್ಕ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಲಾಕ್ಡೌನ್ನಲ್ಲಿ ಬಡವರಿಗೆ ಸಹಾಯ ಮಾಡಿ, ಚಿನ್ನ ಗೆಲ್ಲಿರಿ: ಬಂಟ್ವಾಳ ಉದ್ಯಮಿಯ ಬಿಗ್ ಟಾಸ್ಕ್! - Bantwal BC Road's Unique Jewelers
ಲಾಕ್ಡೌನ್ನಿಂದ ಚಿನ್ನದಂಗಡಿ ಬಂದ್ ಆಗಿರುವಾಗ ಚಿನ್ನ ಖರೀದಿ ಬಗ್ಗೆಯೇ ಆಲೋಚನೆಗಳು ನಡೆಯುತ್ತಿದ್ದರೆ, ಇಲ್ಲೊಬ್ಬ ಉದ್ಯಮಿ ಜನರ ಸಂಕಷ್ಟಕ್ಕೆ ನೆರವಾಗಿ ಎನ್ನುವ ಮೂಲಕ ವಿಭಿನ್ನ ಪ್ರಯತ್ನ ನಡೆಸುತ್ತಿದ್ದಾರೆ. ಬಡವರಿಗೆ ನೆರವಾಗುವ ಜನತೆಗೆ ಅವರು ಒಂದು ಟಾಸ್ಕ್ ಕೊಟ್ಟಿದ್ದಾರೆ. ಸಹಾಯ ಮಾಡಿದವರಿಗೆ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಿದ್ದಾರೆ.
ಅದೇನಂದ್ರೆ ಅಕ್ಷಯ ತೃತೀಯದಂದು ನೀವು ಚಿನ್ನ ಖರೀದಿಸಲು ಯೋಜನೆ ಮಾಡಿಟ್ಟಿದ್ದಲ್ಲಿ ಅದನ್ನು ಸದ್ಯಕ್ಕೆ ಮುಂದೂಡಿ. ಚಿನ್ನ ಖರೀದಿಸಲು ಇಟ್ಟಿರುವ ಕನಿಷ್ಠ ಶೇ.1 ನಗದನ್ನು ನಿಮ್ಮ ಸಮೀಪದ ಯಾವುದಾದರೂ ಒಂದು ತುಂಬಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡಿ. ನಂತರ ವಿವರಗಳನ್ನು 7022183304 ಈ ವಾಟ್ಸ್ಯಾಪ್ ನಂಬರ್ಗೆ ಕಳುಹಿಸಿ. ಅಕ್ಷಯ ತೃತೀಯದ 6 ದಿನಗಳ ಬಳಿಕ ಅಷ್ಟು ದಾನಿಗಳ ಹೆಸರಲ್ಲಿ ಒಬ್ಬರನ್ನು ಅದೃಷ್ಟ ಚೀಟಿಯ ಮೂಲಕ ಆರಿಸಲಾಗುತ್ತದೆ. ಅಲ್ಲದೆ, ಅವರಿಗೆ ಲಾಕ್ಡೌನ್ ಮುಗಿದ ಬಳಿಕ ಅಪೂರ್ವ ಮಳಿಗೆಯಲ್ಲಿ ಚಿನ್ನದ ನಾಣ್ಯ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದ್ದಾರೆ ಉದ್ಯಮಿ ಸುನೀಲ್.
ಸಂಕಷ್ಟದ ಸಮಯದಲ್ಲಿ ಈ ಬಾರಿಯ ಅಕ್ಷಯ ತೃತೀಯವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸೋಣ. ಸಹಾಯ ಪಡೆದವರ ಚಿತ್ರ ಶೇರ್ ಮಾಡದಿರಿ ಎಂದು ಮನವಿ ಮಾಡಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಅಕ್ಷಯ ತೃತೀಯದ ಅಂಗವಾಗಿ ಘೋಷಿಸಿರುವ ಈ ಯೋಜನೆಗೆ ಗ್ರಾಹಕರಿಂದ ಅಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಸುನಿಲ್ ಬಿ. ಸಂತಸ ವ್ಯಕ್ತಪಡಿಸಿದ್ದಾರೆ.