ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿ ಪದಕಕ್ಕೆ ಬಂಟ್ವಾಳ ಸರ್ಕಲ್ ಇನ್ಸ್​ಪೆಕ್ಟರ್ ಟಿ.ಡಿ.ನಾಗರಾಜ್ ಆಯ್ಕೆ - ಮುಖ್ಯಮಂತ್ರಿ ಪದಕಕ್ಕೆ ಇನ್ಸ್​ಪೆಕ್ಟರ್ ಟಿ.ಡಿ.ನಾಗರಾಜ್ ಆಯ್ಕೆ

ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ತೋರಿದ ಕರ್ತವ್ಯ ನಿಷ್ಠೆ ಗುರುತಿಸಿ ಮುಖ್ಯ ಮಂತ್ರಿ ಪದಕ ನೀಡಲು ಸರ್ಕಾರ ಮುಂದಾಗಿದೆ.

ಸರ್ಕಲ್ ಇನ್ಸ್​ಪೆಕ್ಟರ್
ಸರ್ಕಲ್ ಇನ್ಸ್​ಪೆಕ್ಟರ್

By

Published : Jan 1, 2021, 9:58 PM IST

ಬಂಟ್ವಾಳ: 2019ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಯನ್ನು ಗುರುತಿಸಿ ಸರ್ಕಾರ ನೀಡುವ ಮುಖ್ಯಮಂತ್ರಿ ಪದಕಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಆಯ್ಕೆಯಾಗಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ತುಪ್ಪೂರು ಗ್ರಾಮದ ನಾಗರಾಜ್ 2003ರಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಸೇವೆಗೆ ಸೇರಿದ್ದರು. ಬಳಿಕ 2010 ರಲ್ಲಿ ವೃತ್ತ ನಿರೀಕ್ಷಕರಾಗಿ ಬಡ್ತಿ ಹೊಂದಿದ್ದಾರೆ. ದ.ಕ.ಜಿಲ್ಲೆಯ ಅತ್ಯಂತ ಕಠಿಣ ಮತ್ತು ಕೋಮು ಸೂಕ್ಷ್ಮವಾದ ಠಾಣೆಗಳಲ್ಲಿ ಕ್ಲಿಷ್ಟಕರವಾದ ಸಂದರ್ಭ ಗಂಭೀರ ಪ್ರಕರಣಗಳನ್ನು ಭೇದಿಸಿದ್ದಾರೆ.

ಉಳ್ಳಾಲ, ಪುತ್ತೂರು, ಬಜಪೆ, ಕದ್ರಿ, ಬಂಟ್ವಾಳ ಠಾಣೆಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ತೋರಿದ ಜಾಣ್ಮೆ, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾದದ್ದು, ರಾಮಮಂದಿರ ತೀರ್ಪು, ಸಿ.ಎ.ಎ, ಎನ್.ಆರ್.ಸಿ ಮತ್ತು ಚುನಾವಣೆಯ ಬಂದೋಬಸ್ತ್ ಸೇರಿದಂತೆ ಅನೇಕ ಘಟನೆಗಳ ಸಂದರ್ಭದಲ್ಲಿ ಇವರು ಕಾನೂನು ಸುವ್ಯವಸ್ಥೆ ನಿಭಾಯಿಸಿದ್ದನ್ನು ಪರಿಗಣಿಸಲಾಗಿದೆ.

ಬಂಟ್ವಾಳಕ್ಕೆ ವೃತ್ತ ನಿರೀಕ್ಷಕರಾಗಿ ಆಗಮಿಸಿದ ಸಂದರ್ಭದಲ್ಲಿ ವಿಟ್ಲ ವ್ಯಾಪ್ತಿಯ ಕುಂಟ್ರಕಲ ಎಂಬಲ್ಲಿ ಉಂಟಾದ ವಿವಾದ ಸಂದರ್ಭ ಅವರು ಮಾತಿನ ಮೂಲಕವೇ ಬಗೆಹರಿಸಿದ ವಿಧಾನ ವೈರಲ್ ಆಗಿತ್ತು.

ABOUT THE AUTHOR

...view details