ಮಂಗಳೂರು:ನಗರದ ಬಿಜೈನಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ ಪದ್ಮಾಕ್ಷಿ (52) ಎಂಬುವರು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪದ್ಮಾಕ್ಷಿ ಅವರು ನಗರದ ಶಕ್ತಿನಗರದ ನಿವಾಸಿಯಾಗಿದ್ದರು.
ಯೆಯ್ಯಾಡಿ ಶರ್ಬತ್ ಕಟ್ಟೆ ಬಳಿ ಇತ್ತೀಚೆಗೆ ಹೊಸದಾಗಿ ಮನೆ ಖರೀದಿಸಿದ್ದರು. ಇದೇ ಮನೆಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ 9.30ರ ವೇಳೆಗೆ ಮನೆಯಿಂದ ಬ್ಯಾಂಕ್‌ಗೆ ಎಂದು ಹೊರಟವರು ಬ್ಯಾಂಕ್‌ಗೆ ಹೋಗದೇ, ನೇರವಾಗಿ ಹೊಸದಾಗಿ ಖರೀದಿಸಿದ ಮನೆಗೆ ತೆರಳಿದ್ದಾರೆ.